ಬೆಂಗಳೂರು : ಬೆಂಗಳೂರಿನ 60 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ ಸಂಬಂಧಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿ ಅವರು, ಇದೊಂದು ಅಸಹ್ಯ, ಗಾಬರಿ ಆಗುವ ರೀತಿ ಮಾಡಿದ್ದಾರೆ. ಗೃಹ ಇಲಾಖೆ ಸೂಚಿಸುವ ಕ್ರಮಗಳನ್ನ ಶಿಕ್ಷಣ ಇಲಾಖೆ ಕೈಗೊಳ್ಳುತ್ತೆ ದೇಶ ತುಂಬಾ ಅನೇಕ ಘಟನೆಗಳು ನಡೆಯುತ್ತೆ, ಅದಕ್ಕೆ ಬಿಜೆಪಿ ವೈಫಲ್ಯ ಅಂತ ಹೇಳೋಕಾಗುತ್ತಾ ಇಂತಹ ವಿಚಾರಗಳಲ್ಲಿ ಹುಷಾರಾಗಿ ಮಾತನಾಡುವುದು ಒಳ್ಳೆಯದು. ಅಭಿವೃದ್ಧಿ ಬಗ್ಗೆ ಮಾತನಾಡಲ್ಲ, ಇಂತಹ ವಿಚಾರಗಳನ್ನಿಟ್ಟುಕೊಂಡು ಜನರಿಗೆ ಗಾಬರಿ ಹುಟ್ಟಿಸುತ್ತಾರೆ. ಬಿಜೆಪಿ ನಾಯಕರ ಆರೋಪಗಳಿಗೆ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ,