ಮಂಡ್ಯ ನೂತನ ಉಸ್ತುವಾರಿಯಾಗಿ ಸಚಿವ ಅಶ್ವಥ್ ನಾರಾಯಣ್ ಹೆಸರು ಪ್ರಸ್ತಾಪ ವಿಚಾರಕ್ಕೆ ಮಂಡ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath narayan) ಸ್ಪಷ್ಟನೆ ನೀಡಿದ್ದಾರೆ. ಉಸ್ತುವಾರಿ ನಿಶ್ಚಯ ಮಾಡೋದು ಮುಖ್ಯಮಂತ್ರಿಯವರು. ಉಸ್ತುವಾರಿ ವಿಚಾರದಲ್ಲಿ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ.
ಇಂದು ಪಕ್ಷದ ಕಾರ್ಯಕ್ರಮವಿರುವ ಕಾರಣ ಶಕ್ತಿ ಕೇಂದ್ರಗಳು ಹಾಗೂ ಮಹಾ ಶಕ್ತಿ ಕೇಂದ್ರಗಳ ಕಾರ್ಯಕರ್ತರ ಜತೆ ಭಾಗವಹಿಸಲು ಪಕ್ಷ ಸಂಘಟನೆ ಮಾಡಲು ಬಂದಿದ್ದೇನೆ. ಯಾವ ಕಾಲದಲ್ಲಿ ಏನು ಮಾಡ್ಬೇಕು ಅನ್ನೋದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಮುಖ್ಯಮಂತ್ರಿಗಳಿಗೆ ಏನೆಲ್ಲಾ ಸಹಕಾರ ಕೊಡ್ಬೇಕು ಅದನ್ನ ನಾವು ಮಾಡುತ್ತೇವೆ ಎಂದು ಹೇಳಿದ್ರು. ಇದನ್ನೂ ಓದಿ : – Amit Shah- ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ- ಅಮಿತ್ ಶಾ
ಇದೇ ವೇಳೆ ನಾರಾಯಣಗೌಡ (Narayan gowda) ರು ನಮ್ಮ ನಾಯಕರು. ಸ್ವಾಭಿಮಾನಿ. ಜಿಲ್ಲೆಯಲ್ಲಿ ನಮ್ಮ ಪಕ್ಷವನ್ನ ಪ್ರಬಲವಾಗಿ ಸಂಘಟನೆ ಮಾಡಿದ್ದಾರೆ. ಕೆ.ಆರ್ ಪೇಟೆಯ ನವ ನಿರ್ಮಾಣ ಮಾಡಿದ್ದಾರೆ, ಮಂಡ್ಯ ಅಭಿವೃದ್ಧಿ ಮಾಡಿದ್ದಾರೆ. ನಾರಾಯಣಗೌಡರು ಬಹದ್ದೂರು ಗಂಡು. ಅವರು ಸದಾ ಕಾಲ ನಮ್ಮ ಜೊತೆ ಇರ್ತಾರೆ. ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲಾ ಎಂದು ಹೇಳಿದ್ರು.
ಪ್ರವೀಣ್ ನೆಟ್ಟಾರ್ (Praveen nettaru) ಹತ್ಯೆ ಪ್ರಕರಣದ ಆರೋಪಿ ಪುತ್ತೂರಿನ ಅಭ್ಯರ್ಥಿಯಾಗಿ ಎಸ್.ಡಿ.ಪಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ಕಾನೂನಿನ ಚೌಕಟ್ಟಿನಲ್ಲಿ ಸ್ಪರ್ಧೆಗೆ ಯಾರಿಗೆ ಅವಕಾಶ ಇರುತ್ತೊ ಅವರು ಸ್ಪರ್ಧೆ ಮಾಡ್ತಾರೆ. ಪ್ರತಿಯೊಬ್ಬ ಪ್ರಜೆಗೂ ಈ ಕಾನೂನಿನಲ್ಲಿ ಸ್ಪರ್ಧಿಸೋಕೆ ಅಧಿಕಾರವಿದೆ. ಚುನಾವಣೆ ಘೋಷಣೆ ಆದ ಬಳಿಕ ಅಭ್ಯರ್ಥಿ ಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ರು.
ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರ
ಪಕ್ಷದ ಆಲೋಚನೆಗೆ ಒಂದಾಗಿ ಬಂದಾಗ ಜೊತೆಗೆ ಕರೆದುಕೊಂಡು ಹೋಗಲು ನಾವು ಸಿದ್ಧವಿದ್ದೇವೆ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಇದನ್ನೂ ಓದಿ : – ವ್ಯಾಲೆಂಟೈನ್ಸ್ ಡೇ ಹಿನ್ನೆಲೆ – ವಿಭಿನ್ನವಾಗಿ ಟ್ವೀಟ್ ಮಾಡಿ ಬಿಜೆಪಿ ಕಾಲೆಳೆದ ಕಾಂಗ್ರೆಸ್