ಬೆಂಗಳೂರು : ತನ್ವೀರ್ ಸೇಠ್ ಪತ್ರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಈ ಹಿಂದೆ ಶಾಸಕ ತನ್ವೀರ್ ಸೇಠ್, ‘ಅಮಾಯಕರ ಮೇಲಿನ ಪ್ರಕರಣಗಳನ್ನು ಬಿಟ್ಟು ಬಿಡುವಂತೆ’ ಕೋರಿ ಪತ್ರ ಬರೆದಿದ್ದರು. ಈ ವಿಚಾರವಾಗಿ ವಿವಾದ ಉಂಟಾಗಿದ್ದು ಇದೀಗ ಬಸನಗೌಡ ಪಾಟೀಲ ಯತ್ನಾಳ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ತನ್ವೀರ್ ಸೇಠ್ ಬರೆದಿದ್ದ ಪತ್ರದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಕಿಡಿಕಾರಿದ್ದಾರೆ. ಶಾಸಕ ತನ್ವೀರ್ ಸೇಠ್ ಬರೆದ ಪತ್ರವನ್ನು ಟ್ಯಾಗ್ ಮಾಡಿರುವ ಯತ್ನಾಳ್ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಟ್ವೀಟ್ನಲ್ಲಿ, ‘ಗೃಹ ಮಂತ್ರಿ ಶ್ರೀ ಪರಮೇಶ್ವರ ಹಾಗೂ ಶಾಸಕ ತನ್ವೀರ್ ಸೇಠ್ ಹೇಳಿದ್ದು, ನಾವು ಯಾವ ಒಂದು ಕೋಮಿನ ಪರವೂ ಅಲ್ಲ. ಎಲ್ಲಾ ಅಮಾಯಕರ ಕೇಸುಗಳನ್ನು ಹಿಂಪಡೆಯಲು ಹೇಳಿದ್ದೇವೆ ಎಂದು ಹೇಳಿದ್ದನ್ನು ಗಮನಿಸಿದ್ದೇನೆ. ಸುಳ್ಳು ನೂರು ಬಾರಿ ಹೇಳಿದರೆ ಸತ್ಯವಾಗದು. ಶಾಸಕರ ಪತ್ರದಲ್ಲಿ ‘ಒಂದು ಕೋಮಿನ ನಿರ್ದಿಷ್ಟ’ ಅಮಾಯಕರು ಎಂದು ಬರೆದಿದ್ದೀರಿ. ಯಾವ ಕೋಮು ಅದು? ಯಾಕೆ ಅದೇ ಕೋಮಿನವರು ಕಲ್ಲು ಹೊಡೆದಿದ್ದಾರೆ? ಅವರೇ ಬಂಧಿಯಾಗಿದ್ದಾರೆ? ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಕೇಸಿನಲ್ಲಿ ಅದೇ ನಿರ್ದಿಷ್ಟ ಕೋಮಿನವರಿದ್ದಾರೆ ಯಾಕೆ? ಒಂದೇ ಕೋಮು ಅದು ಯಾವುದು ಮಾನ್ಯ ಶಾಸಕರೇ?’ ಎಂದು ಪ್ರಶ್ನಿಸಿದ್ದಾರೆ.