Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

“ರಾವಣ ಪೋಸ್ಟರ್ “ವಿವಾದ ಮಂಡ್ಯದಲ್ಲಿ ಹೆದ್ದಾರಿ ತಡೆದು ಕೈ ಶಾಸಕರ ಪ್ರತಿಭಟನೆ..!!

ಮಂಡ್ಯ : ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯು ಅವರನ್ನು ರಾವಣನಂತೆ ಬಿಂಬಿಸಿ ಬಿಡುಗಡೆ ಮಾಡಿದ ಪೋಸ್ಟರ್‌ಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರು, ನಾಯಕರು ಹಾಗೂ ನೂರಾರು ಕಾರ್ಯಕರ್ತರು ವಿರೋಧಿಸಿ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಸುಮರವಿ ಕಲ್ಯಾಣ ಮಂಟಪದ ಮುಂಭಾಗ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷ ದುಷ್ಟತನವನ್ನು ಪ್ರದರ್ಶನ ಮಾಡಿಕೊಂಡು ಬರುತ್ತಿದೆ. ಚುನಾವಣೆ ಬಂತೆದ್ದರೆ ಬಿಜೆಪಿ ಅಪಪ್ರಚಾರ ಮಾಡೋದನ್ನ ಕಾಯಕ ಮಾಡಿಕೊಂಡಿದೆ. ಅಪಪ್ರಚಾರದಿಂದ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಇನ್ನು ಸಂಕ್ರಾತಿ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ಸುದ್ದಿಗಾರರ ಪ್ರಶ್ನೆಗೆ ಸರ್ಕಾರ ಬೀಳುತ್ತೆ ಎನ್ನುವವರಿಗೆ ಹುಚ್ಚು ಹಿಡಿದಿದೆ. ಅವರನ್ನ ನಿಮಾನ್ಸ್‌ಗೆ ಸೇರಿಸಬೇಕಿದೆ. ಅಧಿಕಾರವಿಲ್ಲದೆ ತಡದುಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ 136 ಮಂದಿ ಕಾಂಗ್ರೆಸ್ ಶಾಸಕರನ್ನು ತಲೆಕೆಟ್ಟು ಜನರು ಗೆಲ್ಲಿಸಿಲ್ಲ. ಈ ರಾಜ್ಯಕ್ಕೆ ಏನ್ ಬೇಕು, ಏನ್ ಆಗಬೇಕೆಂದು ಅರ್ಥ ಮಾಡಿಕೊಂಡೆ ಬಹುಮತ ಕೊಟ್ಟಿರೋದು. ಬಿಜೆಪಿ-ಜೆಡಿಎಸ್ ಇಬ್ಬರು ಸೇರಿದ್ರೆ 90 ಜನ ಇಲ್ಲ. ಅವರು ಏನ್ ಮಾತಾಡೋದು ಎಂದು ವಾಗ್ಧಾಳಿ ನಡೆಸಿದರು. ನಾವು 100 ಕ್ಕೆ 100 ಪರ್ಸೆಂಟ್ ಮತ್ತೋಮ್ಮೆ ಅಧಿಕಾರಕ್ಕೆ ಬರ್ತೀವಿ. ಈ ರಾಜ್ಯವನ್ನು ಉದ್ದಾರನು ಮಾಡ್ತೇವೆ.

ಈ‌ ಬರಗಾಲದಲ್ಲಿಯು ಜನರು ನೆಮ್ಮದಿಯಲ್ಲಿದ್ದಾರೆ ಎಂದರೇ ಅದಕ್ಕೆ ಕಾರಣ ಸಿದ್ದರಾಮಯ್ಯರ ಆಡಳಿತ, ರಾಹುಲ್ ಗಾಂಧಿಯವರ ನಿರ್ದೇಶನ. ಸರ್ಕಾರ ಬೀಳುತ್ತೆ ಅನ್ನೋರನ್ನ ನಿಮಾನ್ಸ್‌ಗೆ ಸೇರಿಸುತ್ತೇವೆ
ಸದ್ಯಕ್ಕೆ ಬೆಡ್ ಖಾಲಿ ಇಲ್ಲ. ಸರ್ಕಾರ ಬೀಳುತ್ತೆ ಎಂಬ ಜೆಡಿಎಸ್, ಬಿಜೆಪಿ ನಾಯಕರಿಗೆ ಮಳವಳ್ಳಿ ಕೈ ಶಾಸಕ ನರೇಂದ್ರಸ್ವಾಮಿ ಟಾಂಗ್ ನೀಡಿದರು. ಪ್ರತಿಭಟನೆಯಲ್ಲಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹಾಗೂ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!