ತುಮಕೂರು : ಮೋದಿಗೆ ಇರೋ ವಿಶ್ವಗುರು ಪದವನ್ನ ಚೇಂಜ್ ಮಾಡ್ಬೇಕು ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮೋದಿ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆ ಬಿಜೆಪಿಯಿಂದ ಸಾಧನ ಸಮಾವೇಶ ಕಾರ್ಯಕ್ರಮ ಆಚರಣೆ ವಿಚಾರವಾಗಿ ತುಮಕೂರಿನಲ್ಲಿ ಮಾತನಾಡಿದ ಪರಮೇಶ್ವರ್, ಯಾವುದೇ ಸರ್ಕಾರ ಆದ್ರು ಸಾಧನೆ ಮಾಡಿವೆ ಅಂತ ಹೇಳಿಕೊಳ್ಳೊಕೆ ಕಾರ್ಯಕ್ರಮಗಳನ್ನ ಮಾಡ್ತಾರೆ. ನಾನು ಕರ್ನಾಟಕದ ಮಟ್ಟಿಗೆ ಹೇಳೋದಾದ್ರೆ, ಬಿಜೆಪಿಯವರನ್ನ ಜನ ಸಮುದಾಯ ಗಮನಿಸಿದ್ದಾರೆ. ಕಾಂಗ್ರೆಸ್ 135 ಸಿಟ್ ಕೊಡುವ ಮೂಲಕ ಬಿಜೆಪಿಯನ್ನ ತಿರಸ್ಕಾರ ಮಾಡಿದ್ದೇವೆ ಎಂಬ ಮೇಸೆಜ್ ಕೊಟ್ಟಿದ್ದಾರೆ.
ಇವರ ಸಾಧನೆ ಯಾವುದು..? 40% ಕಮಿಷನ್ ತಗೊಂಡಿರೋ ಸಾಧನೆನಾ..? ಆಡಳಿತ ಚೆನ್ನಾಗಿರಲಿಲ್ಲ ಎಂಬ ಸಾಧನೆನಾ..?
15 ಲಕ್ಷ ತಂದು ಕೊಡ್ತಿವಿ, ಕಪ್ಪು ಹಣವನ್ನ ಮೂರೇ ದಿವಸದಲ್ಲಿ ತಂದು ಬಿಡ್ತಿವಿ ಅಂದಿದ್ದಾ ಎಂದು ಪ್ರಶ್ನಿಸಿದರು.
ಇನ್ನು ಆ ಹಣ ನಮಗೂ ಇಲ್ಲ ನಿಮಗೂ ಇಲ್ಲ. ಅದಕ್ಕೆನಾದ್ರು ಸಾಧನೆನಾ..? ಪ್ರಧಾನಿಗಳು ನೂರಾರು ದೇಶಗಳಿಗೆ ಹೋಗಿ ಭಾರತದ ಬಗ್ಗೆ ಭಾಷಣ ಮಾಡಿ ಬಂದಿದ್ದಾರೆ. ಅದರ ಬಗ್ಗೆ ನಾನು ಏನು ಹೇಳಲ್ಲ. ನಮ್ಮ ದೇಶ ಇನ್ನು ಅಭಿವೃದ್ಧಿಯಾಗಿಲ್ಲ.
ಮೋದಿಗೆ ಇರೋ ವಿಶ್ವಗುರು ಪದವನ್ನ ಚೆಂಜ್ ಮಾಡ್ಬೇಕು ಎಂದರು.
ಇನ್ನು ಇದೇ ವೇಳೆ ಅಕ್ಕಿ ವಿತರಣೆಯಲ್ಲಿ ಗೊಂದಲ ವಿಚಾರವಾಗಿ ಮಾತನಾಡಿ, ಕೇಂದ್ರದವರು ಮುಲಾಜಿಗೆ ಕೊಟ್ಟಿದ್ದಾರಾ. ಇಡೀ ದೇಶಕ್ಕೆ ಕೊಟ್ಟಿದ್ದಾರೆ. ಹಾಗೆಯೇ ನಮಗೂ ಕೊಟ್ಟಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಮಾತ್ರ ಕೊಟ್ಟಿದ್ದಾರೆ ಅಕ್ಕಿನಾ ಅಂದ್ರೆ.
ಪರವಾಗಿಲ್ಲಪ್ಪ, ಕೇಂದ್ರ ಸರ್ಕಾರದವರು ಅಂತ ಹೇಳಬಹುದಿತ್ತು. ನಾವು 10 ಕೆಜಿ ಅಕ್ಕಿ ಕೊಡ್ತಿವಿ ಹೇಳಿದ್ದಿವಿ ಕೊಡ್ತಿವಿ. ಅಮಿತ್ ಷಾ ಅವರನ್ನ ಭೇಟಿ ಮಾಡಿದ್ದಾರೆ. ಅವರ ಬಳಿ ಏನ್ ಮಾತಾಡಿದ್ರು ಅನ್ನೋದು ನನಗೆ ಗೊತ್ತಿಲ್ಲ ಎಂದರು.