Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ವಿಚಾರಕ್ಕೆ ತಾಯಿ ಮಗನಿಗೆ ಚಾಕು ಇರಿತ

ಬೆಂಗಳೂರು : ಗಣೇಶ ವಿಸರ್ಜನೆ ಸಂಭ್ರಮದ ವೇಳೆ ಡ್ಯಾನ್ಸ್ ಮಾಡೋ ವಿಚಾರಕ್ಕೆ ಎರಡು ಗುಂಪುಗಳ ನಡಯವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಶ್ರೀನಿವಾಸ್ ಎಂಬುವವನು ಸಾವನ್ನಪ್ಪಿದ್ರೆ ರಂಜಿತ್ ಎನ್ನುವವನಿಗೂ ಗಂಭೀರ ಗಾಯವಾಗಿದೆ. ಗಲಾಟೆ ವೇಳೆ ಜಗಳ ಬಿಡಿಸಲು ಬಂದಿದ್ದ ಶ್ರೀನಿವಾಸ್ ತಾಯಿಗೂ ಕಿಡಿಗೇಡಿಗಳು ಚಾಕು ಇರಿದ್ದಾರೆ.

This image has an empty alt attribute; its file name is image-296.png


ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ರಂಜಿತ್ ಹಾಗೂ ಶ್ರೀನಿವಾಸ್ ತಾಯುಗೆ ಚಿಕಿತ್ಸೆ ಕೊಡಿಸಲಾಗ್ತಿದೆ. ಹಿಂದಿನ ತಿಂಗಳು ನಡೆದ ಗಣೇಶ ವಿಸರ್ಜನಾ ಸಮಯದಲ್ಲಿ ಡ್ರಾನ್ಸ್ ವಿಚಾರವಾಗಿಯೂ ಗಲಾಟೆಯಾಗಿತ್ತು. ಶ್ರೀನಿವಾಸ್ ಕಡೆಯವರಿಗೆ ನೀವೂ ಡ್ಯಾನ್ಸ್ ಮಾಡಬೇಡಿ ಇಲ್ಲಿ ಅಂತಾ ಎದುರಾಳಿ ಗುಂಪು ವಾರ್ನ್ ಮಾಡಿದ್ರಂತೆ.ನಿನ್ನೆ ಇವರು ಗಣಪತಿ ಬಿಡುವಾಗ ಶ್ರೀನಿವಾಸ್ ಏರಿಯಾದಲ್ಲಿ ಡ್ಯಾನ್ಸ್ ಮಾಡಿದ್ರೂ. ಈ ವೇಳೆ ಈ ಗಣೇಶ ಬಲಿ ಕೇಳುತ್ತೆ ಅಂತಾ ಕೂಗಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ‌.ಗಲಾಟೆಯಲ್ಲಿ ಲಾಂಗು ಮಚ್ಚು ಹಿಡಿದು ಹೊಡೆದಾಡಿಕೊಂಡಿದ್ದಾರೆ.
ಗಲಾಟೆ ಮಾಡಬೇಕು ಅಂತಾ ರೆಡಿಯಾಗಿಯೇ ಬಂದಿದ್ದ ಓರ್ವ ರೌಡಿಶೀಟರ್ ಇದ್ದ ಗುಂಪು
ಗಲಾಟೆ ಮಾಡಿದೆ. ಸದ್ಯ ಘಟನೆಯಲ್ಲಿ ಒರ್ವ ಸಾವನ್ನಪ್ಪಿದ್ರೆ ಇಬ್ಬರು ಆಸ್ಪತ್ರೆಪಾಲಾಗಿದ್ದಾರೆ.
ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಪೊಲೀಸ್ರು ಆರೋಪಿಗಳಿಗೆ ಬಲೆಬೀಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!