ಬೆಂಗಳೂರು: ನೀವು ಈ ಮಾರ್ಗವಾಗಿ ಓಡಾಡ್ತಾ ಇದ್ರೆ ಖಂಡಿತ ಎಚ್ಚರ ವಹಿಸಲೇಬೇಕು. ಯಾಕಂದ್ರೆ ಈ ರಸ್ತೆಯಲ್ಲಿ ಯಮ ಧರ್ಮ ಕಾಯುತ್ತಾ ಕುಳಿತ್ತಿದ್ದಾನೆ. ಹೌದು ಸಿಲಿಕಾನ್ ಸಿಟಿಯ ಮಲ್ಲೇಶ್ವರಂ ಮಾರ್ಗವಾಗಿ ನವರಂಗ್ ಸರ್ಕಲ್ ಹೋಗ್ತಾ ಇದ್ರೆ ಈ ಮಾಹಿತಿಯನ್ನೊಮ್ಮೆ ನೋಡಿ.
ಮಲ್ಲೇಶ್ವರಂ ಮಾರ್ಗವಾಗಿ ನವರಂಗ್ ಸರ್ಕಲ್ ಗೆ ಹೋಗೋ ರಸ್ತೆಯಾ ಮಧ್ಯೆ ಕಾಮಗಾರಿ, ಅಡ್ಡಲಾಗಿದೆ ಬ್ಯಾರಿಕೇಟ್ ಹಾಕಲಾಗಿದೆ. ಎಚ್ಚರ ತಪ್ಪಿದ್ರೆ ಈ ಅರ್ಧಂ ಮರ್ದ ಕಾಮಗಾರಿಯಿಂದ ಕಾಮಗಾರಿ ಬಲಿ ತೆಗೆದುಕೊಳ್ಳಲು ಕಾದು ಕುಳಿತಿದೆ. BWSSB ಕಾಮಗಾರಿಯಿಂದ ಅರ್ಧ ರಸ್ತೆ ಕ್ಲೋಸ್ ಆಗಿಬಿಟ್ಟಿದೆ. ಇದರಿಂದ ಸವಾರರೇ ಕೊಂಚ ಎಚ್ಚರವಹಿಸಲೇಬೇಕು. ಅವಸರ ಅವಸರವಾಗಿ ವಾಹನ ಚಲಾಯಿಸಿದ್ರೆ ಸಾವು ನಿಮ್ಮ ಕಣ್ಣು ಮುಂದೆಯೇ ಬರುತ್ತೆ.
ಇನ್ನು ಈ ರಸ್ತೆಯಲ್ಲಿ ಕಳೆದು ಹದಿನೈದು ದಿನಗಳಿಂದ ಪ್ರತಿಬಾರಿ ಮಳೆಯಾದಾಗ ಒಳಚರಂಡಿ ನೀರು ರಸ್ತೆಯ ಮೇಲೆ ನಿಲ್ಲುತ್ತಿತ್ತು. ಈ ಹಿನ್ನೆಲೆ ಜಲಮಂಡಳಿ ಒಳಚರಂಡಿ ಅಗೆದು ಅರ್ಧಬರ್ಧ ಕಾಮಗಾರಿ ನಡೆಸಿದೆ. ಜಲಮಂಡಳಿಯ ಈ ಕಾಮಗಾರಿಯಿಂದಾಗಿ ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.