ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಅಕ್ರಮ ‘ಎ’ ಖಾತಾ ಪ್ರಮಾಣಪತ್ರ ಗಳನ್ನು ನೀಡುತ್ತಿರುವ ಕುರಿತು ತನಿಖೆ ನಡೆಸಲು ಪಾಲಿಕೆ ಮುಂದಾಗಿದೆ.
ಪಾಲಿಕೆಯ ಮೂಲಗಳ ಪ್ರಕಾರ, ಎಲ್ಲಾ ವಾರ್ಡ್‌ಗಳು ‘ಬಿ’ ಆಸ್ತಿಗಳಿಗೆ ‘ಎ’ ಖಾತಾ ನೀಡಲಾಗಿರುವ ಬಗ್ಗೆ ತನಿಖೆ ಆರಂಭವಾಗುತ್ತಿದೆ. ಆರ್‌ಆರ್ ನಗರ ವಲಯದ ಕಾರ್ಯಾಚರಣೆ ಪ್ರಾರಂಭವಾಗಿದೆ. ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಅಂಜನಾಪುರದ ಲಟಿಪಾ ಬಿಬಿಎಂಪಿಯ ಕಂದಾಯ ಉಪ ಇಲಾಖೆಗೆ ಭೇಟಿ ನೀಡಿ ಅಕ್ರಮ ‘ಎ’ಖಾತಾ ನೀಡಿರುವ 2 ವಾರ್ಡ್ ಗಳ ದಾಖಲೆಗಳನ್ನು ಪರಿಶೀಲಿಸಿದ್ದರು. ಅಲ್ಲಿ 698 ಅಕ್ರಮ ‘ಎ’ ಖಾತಾ ನೀಡಲಾಗಿದೆ ಎಂದು ತಿಳಿದು ಬಂದಿತ್ತು.
ಸಹಾಯಕ ಕಂದಾಯ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಅಕ್ರಮವಾಗಿ ‘ಬಿ’ ಖಾತಾಗಳನ್ನು ‘ಎ’ ಖಾತಾಗಳಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಮುಂದಾಗಿದ್ದೇವೆ. ಪಾಲಿಕೆಯ ಇತ್ತೀಚಿನ ಲಟಿಪಾ ಆದೇಶದ ಪ್ರಕಾರ ಅಕ್ರಮ 3,666 ‘ಎ’ ಖಾತಾಗಳನ್ನು ‘ಬಿ’ ಖಾತಾಗಳಾಗಿ ಮರುಪರಿವರ್ತಿಸಬೇಕಿದೆ. ಅಕ್ರಮ ‘ಎ’ ಖಾತಾಗಳಿಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿವೆ.
ಅಂತಹದರಲ್ಲಿ 45,000 ಆಸ್ತಿಗಳನ್ನು ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತಿಸಲಾಗಿದೆ ಎಂದು ಗಮನಕ್ಕೆ ಬಂದಿದೆ ಎಂದು ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಅಂತಹ ಶೇಕಡಾ 90 ಕ್ಕೂ ಹೆಚ್ಚು ಆಸ್ತಿಗಳನ್ನು ಅಕ್ರಮವಾಗಿ ಪರಿವರ್ತಿಸಲಾಗಿದೆ ಹೀಗಾಗಿ ಅಂತಹ ಲಟಿಪಾ ಎಲ್ಲಾ ಆಸ್ತಿಗಳನ್ನು ಮರುಪರಿಶೀಲಿಸುವಂತೆ ಆದೇಶಿಸಲಾಗುತ್ತಿದೆ ಎಂದು ರಾಯಪುರ ಮಾಹಿತಿ ನೀಡಿದ್ದಾರೆ. ಪಾಲಿಕೆ ಕಂದಾಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರಾಗಿ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.