ಚೀನಾ : ಡೆಡ್ಲಿ ಕೊರೊನಾ ಅಟ್ಟಹಾಸ ಮೆರೆದ ಬೆನ್ನಲ್ಲೆ ಚೀನಾದಲ್ಲಿ ಇದೀಗ ಮತ್ತೊಂದು ಹೊಸ ರೋಗ ಉಲ್ಬಣಗೊಂಡಿದ್ದು, ಮತ್ತೆ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಇಲ್ಲಿನ ಶಾಲೆಗಳಲ್ಲಿ ನಿಗೂಢ ನ್ಯುಮೋನಿಯಾ ಉಲ್ಬಣಗೊಳ್ಳುತ್ತಿದ್ದು, 500 ಮೈಲುಗಳಷ್ಟು ದೂರದಲ್ಲಿರುವ ಬೀಜಿಂಗ್ ಮತ್ತು ಲಿಯಾನಿಂಗ್‌ನಲ್ಲಿರುವ ಆಸ್ಪತ್ರೆಗಳಿಗೆ ಮಕ್ಕಳನ್ನು ದಾಖಲು ಮಾಡಲಾಗುತ್ತಿದೆ. ಚೀನಾ ಜನತೆಗೆ ಕೊರೊನಾ ದಿನಗಳನ್ನು ನೆನಪಿಸುವಂತಾಗಿದ್ದು ಮನೆ ಮನೆಗಳಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ.
ನ್ಯುಮೋನಿಯಾ ಲಕ್ಷಣಗಳೇನು?
ಈ ನಿಗೂಢ ನ್ಯುಮೋನಿಯಾದಿಂದ ಬಳಲುತ್ತಿರುವ ಮಕ್ಕಳು ಶ್ವಾಸಕೋಶದಲ್ಲಿ ಊತ ಮತ್ತು ಅಧಿಕ ಜ್ವರ ಸೇರಿದಂತೆ ಅಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಆದಾಗ್ಯೂ, ಕೆಮ್ಮು ಮತ್ತು ಜ್ವರ, ಆರ್‌ಎಸ್‌ವಿ ಮತ್ತು ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಲಕ್ಷಣಗಳು ಆ ಮಕ್ಕಳಲ್ಲಿ ಕಂಡುಬಂದಿಲ್ಲ ಎಂಬುವುದು ವರದಿಯಾಗಿದೆ.
ಅನೇಕ ಮಕ್ಕಳಲ್ಲಿ ನಿಗೂಢ ನ್ಯುಮೋನಿಯಾ ಇಷ್ಟು ಬೇಗನೆ ಪರಿಣಾಮ ಬೀರುವುದು ಅಸಾಮಾನ್ಯವೇನಲ್ಲ” ಎಂದು ಪ್ರೊಮೆಡ್ ಹೇಳಿದರು ಅಲ್ಲದೇ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಅಲ್ಲದೇ ನಿಗೂಢ ನ್ಯುಮೋನಿಯಾದಿಂದಾಗಿ ಏಕಾಏಕಿ ಹೆಚ್ಚಿನ ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳಿಂದ ಬಹಿರಂಗವಾಗಿದೆ.