ಬೆಂಗಳೂರು : ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ ಗಲಭೆ ತನಿಖೆಗಾಗಿ ಎನ್ಐಎ(NIA) ಬರುವ ಅವಶ್ಯಕತೆಯಿಲ್ಲ ಎಂದು ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಟಿ (Press Conference)ಆಲಂಪಾಷ (Alam Pasha)ಆಗ್ರಹಿಸಿದ್ದಾರೆ.
ಹೆಲ್ಪಿಂಗ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಮತ್ತು ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಮಾತನಾಡಿ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ 550 ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಅಮಾಯಕರನ್ನು ಅರೆಸ್ಟ್ ಮಾಡಿದವರನ್ನು ಬಿಡುಗಡೆ ಮಾಡಬೇಕು. ಗಲಭೆಯಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದಿದ್ದಾರೆ.
ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆ ಪ್ರಕರಣ ಸಂಬಂಧಿಸಿ ಯಾವುದೇ ಸಾಕ್ಷಿಗಳಿಲ್ಲದೇ ಮುಗ್ದರನ್ನ ಅರೆಸ್ಟ್ ಮಾಡಿದ್ದಾರೆ.ಘಟನೆ ಸಂಬಂಧ ತಪಾಸಣೆ ಮಾಡಿಲ್ಲ. ಸ್ಥಳದ ಮಹಜರು ನಡೆಸಿಲ್ಲ. ಯಾರೋ ಹೇಳಿದ್ದನ್ನ ಕೇಳಿ ಅಮಾಯಕರನ್ನ ಜೈಲಿಗೆ ಹಾಕಿದ್ದಾರೆ. ಮೂರು ವರ್ಷಗಳಿಂದ ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಅವರನ್ನ ಬಿಡುಗಡೆ ಮಾಡಲಿ. 800 ರಿಂದ 1000 ಜನರು ಘಟನೆಯಲ್ಲಿ ಭಾಗಿಯಾಗಿದ್ದಾರೆ. ರಾಜಕೀಯ ಪಕ್ಷಗಳು ಭಾಗಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. 480 ಜನರು ಅರೆಸ್ಟ್ ಆಗಿದ್ದು 475 ಜನ ಮುಗ್ಧರಿದ್ದಾರೆ ಹೀಗಾಗಿ ಅಮಾಯಕರನ್ನ ಬಿಡುಗಡೆ ಮಾಡಬೇಕು ಎಂದಿದ್ದಾರೆ.
ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ಕುರಿತು ನಾನು ಬರೆದ ಪತ್ರದ ಮೇಲೆ ತನ್ವೀರ್ ಸೇಠ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರ ಅದರ ಬಗ್ಗೆ ಕ್ರಮಕೈಗೊಳ್ಳುವುದು ಉತ್ತಮ. ಗಲಭೆಯಲ್ಲಿ ಇದ್ದವರು ಕೂಡ ಸಾಕಷ್ಟು ಜನ ಅಮಾಯಕರು ಇದ್ದಾರೆ. ಗಲಾಟೆ ನೋಡೊದಕ್ಕೆ ಹೋದವರು ಅರೆಸ್ಟ್ ಮಾಡಿದ್ದಾರೆ. ಮನೆಗೆ ಬಂದ ನೆಂಟರನ್ನು, ವಿದ್ಯಾರ್ಥಿಗಳ ಬಂಧಿಸಿದ್ದಾರೆ. ಈ ಗಲಭೆಯ ತನಿಖೆಗಾಗಿ ಎನ್ಐಎ ಬರುವ ಅವಶ್ಯಕತೆ ಇರಲಿಲ್ಲ, ಅದರೂ ಎನ್ ಐ ಎ ಬಂದಿದೆ. ಇಲ್ಲಿ ಯಾವುದೇ ಭಯೋತ್ಪಾದಕರು ಇಲ್ಲ, ಎನ್ ಐಎ ಬರೋದಕ್ಕೆ ಸ್ಥಳೀಯ ಪೊಲೀಸರು ಸಾಕಾಗಿತ್ತು. ಎನ್ಐಎಗೆ ಕೊಟ್ಟಿರೋ ಪ್ರಕರಣವನ್ನು ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಲಂ ಪಾಷ ಆಕ್ರೋಶ ವ್ಯಕ್ತಪಡಿಸಿದ್ದಾರೆ