ಕೋಲಾರ : ಸಾಲ ವಸೂಲಿ ಮಾಡಲು ಬಂದಿದ್ದ ಸಿಬ್ಬಂದಿ ಬೈಕ್ ಗೆ ಮಹಿಳೆಯರು ಬೆಂಕಿ ಹಚ್ಚಿರುವ ಘಟನೆ ಕೋಲಾರದ ಬಿಸ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ಸ್ತ್ರೀಶಕ್ತಿ ಸಂಘದ ಮಹಿಳೆಯರು ಗೋಕುಂಟೆ ಸೊಸೈಟಿಯಲ್ಲಿ ಸಾಲ ಪಡೆದಿದ್ದರು. ಹೀಗಾಗಿ ಸೊಸೈಟಿ ಸಿಬ್ಬಂದಿ ಜೋಸೆಫ್ ಅನ್ನೋರು ಸಾಲ ವಸೂಲಿಗೆ ಅಂತ ಬಂದಿದ್ದರು. ಈ ವೇಳೆ ಮಹಿಳೆಯರು ಸಾಲ ಕಟ್ಟೋದಿಲ್ಲ, ಸಿದ್ದರಾಮಯ್ಯ ಸಾಲ ಮನ್ನಾ ಮಾಡೋದಾಗಿ ಹೇಳಿದ್ದಾರೆ. ಅಲ್ಲದೆ ಮಾತಿಗೆ ಮಾತು ಬೆಳೆದು ಮಹಿಳೆಯರು ಜೋಸೆಫ್ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ.
ಅಂದಹಾಗೆ ಕೋಲಾರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಸಿದ್ದರಾಮಯ್ಯರ ಸಾಲಮನ್ನಾ ಘೋಷಣೆಯಿಂದಾಗಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ.