ಬೆಂಗಳೂರು: ಫೈಟರ್ ರವಿ ಫೀಲ್ಡಲ್ಲಿ ಹೆಸರು ಮಾಡಿದ್ದ ಆಸಾಮಿ.. ನಾಗಮಂಗಲದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಟಿಕೆಟ್ ಕೈತಪ್ಪಿತು. ಇದೀಗ ಐಟಿ ದಾಳಿಯಾಗಿ ಸಿಸಿಬಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಫೈಟರ್ ರವಿ ಅಂದ್ರೆನೆ ಎಲ್ಲಾರಿಗೂ ಗೊತ್ತಾಗೊದು.. ರವಿ ಇದೀಗ ಮತ್ತೆ ಸುದ್ದಿಯಲ್ಲಿರೋಕೆ ಕಾರಣ ಮೊನ್ನೆಯಷ್ಟೇ ತೆರಿಗೆ ವಂಚನೆ ಆರೋಪದ ಮೇಲೆ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು. ಈಗ ಸಿಸಿಬಿಯ ದೃಷ್ಟಿ ಸಹ ಫೈಟರ್ ರವಿ ಮೇಲೆ ಬಿದ್ದಿದ್ದು ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಗೋಡಂಬಿ ವ್ಯವಹಾರದ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಫೈಟರ್ ರವಿ ಮನೆಗೆ ಬಂದಾಗ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ.
ಇನ್ನು ನನ್ನ ಮೇಲೆ ಯಾವ ಪ್ರಕರಣ ದಾಖಲಾಗಿದೆ ಎಂಬುದರ ಮಾಹಿತಿ ತನಗಿಲ್ಲ. ನೋಟೀಸ್ ವಿಚಾರವನ್ನು ನಮ್ಮ ವಕೀಲ ಬಳಿ ಚರ್ಚಿಸಿ ಉತ್ತರ ಕೊಡುತ್ತೇನೆ ಎಂದಿದ್ದಾರೆ. ಐಟಿ ಅಧಿಕಾರಿಗಳು ಬಂದಿರ ಬಹುದು ತನಿಖೆ ಎದುರಿಸಲು ಸಿದ್ದನಿದ್ದೇನೆ ಎಂದು ರವಿ ಪ್ರತಿಕ್ರಿಯೆ ನೀಡಿದ್ದಾರೆ.