Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಹಣ ಕೊಟ್ಟರೆ ಮಾತ್ರ ಈ ಆಸ್ಪತ್ರೆಯಲ್ಲಿ ಹೆರಿಗೆ ಭಾಗ್ಯ..!

ಬಾಗಲಕೋಟ : ಸರ್ಕಾರಗಳು ಬಡವರ ಆರೋಗ್ಯಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುತ್ತವೆ. ಆದರೆ, ಸರ್ಕಾರಿ ಆಸ್ಪತ್ರೆಗಳ ಮೇಲೆಯೂ ಭ್ರಷ್ಟ ವೈದ್ಯರ ಕಣ್ಣು ಬಿದ್ದಿರೋದು ದುರಂತವೇ ಸರಿ.

ಬಾಗಲಕೋಟೆ ಜಿಲ್ಲೆಯ ರಬಕವಿ ರಬಕವಿಯ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಹಣ ಕೊಟ್ಟರೆ ಮಾತ್ರ ಹೆರಿಗೆ ಮಾಡಿಸುತ್ತಾರೆ ಎಂಬ ಆರೋಪ ಕೇಳಿದ ಹಿನ್ನೆಲೆ.


ರಿಯಾಲಿಟಿ ಚೆಕ್ ಗೆ ಹೋಗಿದ್ದ ರಾಜ್ ನ್ಯೂಸ್ ಗೂ ಕೂಡ ವೈದ್ಯರು,ಸಿಬ್ಬಂದಿಗಳು ಹಣ ಪಡೆದಿರುವ ಬಗ್ಗೆ ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.

ಹಣ ನೀಡಿದ್ದನ್ನು ಎಲ್ಲಿಯಾದರೂ ಬಾಯಿಬಿಟ್ಟರೆ ರೋಗಿಗಳಿಗೆ ಟಾರ್ಚರ್ ನೀಡುತ್ತಾರೆ ಎಂಬ ಆಘಾತಕಾರಿ ವಿಚಾರವು ಕೂಡ ರಾಜ್ ನ್ಯೂಸ್ ಗೆ ಲಭ್ಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟೆ ಜಿಲ್ಲಾ ಮಹಿಳಾ ಘಟಕದ ಉಪಧ್ಯಕ್ಷ ರಾಜೇಶ್ವರಿ ಅವರು ಹಣ ಪಡೆದಿರುವ ಬಗ್ಗೆ ನಮಗೂ ಕೂಡ ಸಾಕಷ್ಟು ದೂರುಗಳು ಬಂದಿವೆ.ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!