ಬೆಂಗಳೂರು : ಸಂವಿಧಾನ ಬಳಗ ಸಮುದಾಯದ ಸಾಧಕರಿಗೆ ಸಮುದಾಯದಿಂದಗೌರವ ಸಮರ್ಪಣಾ ಸಮಾರಂಭವನ್ನು ನಗರದ ಪುಟ್ಟಣ್ಣ ಶೆಟ್ಟಿ ಪುರಭವನದಲ್ಲಿ ಆಯೋಜಿಸಲಾಗಿತ್ತು.
ಹಲವು ಸಚಿವರು, ಶಾಸಕರು ಹಾಗೂ ಐಎಎಸ್ ಅಧಿಕಾರಿಗಳಿಗೆ ಡಾ ಬಿ ಆರ್ ಅಂಬೇಡ್ಕರ್ ಅವರ ಪದಕ ಹಾಗೂ ಸಂವಿಧಾನದ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ಇದಾಗಿತ್ತು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಜಿ ಪರಮೇಶ್ವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇನ್ನು ಹಲವು ಬೇಡಿಕೆಗಳ ಹಕ್ಕೋತ್ತಾಯವನ್ನು ಕಾರ್ಯಕ್ರಮದಲ್ಲಿ ಮಂಡಿಸಲಾಯಿತು. ಕಾರ್ಯಕ್ರಮದಲ್ಲಿ ಸಮುದಾಯದ ಚಿಂತಕರು ಡಾ ಬಿ ಆರ್ ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು ಭಾಗಿಯಾಗಿದ್ದರು.