ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಕಾರ್ಯಕರ್ತನ ಅಭಿಮಾನಕ್ಕೆ ಭಾವುಕರಾದ ಘಟನೆ ಕೊರಟಗೆರೆಯ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಪರಮೇಶ್ವರ್ ಬೆಂಬಲಿಸಿ ಗೊಲ್ಲ ಸಮುದಾಯದಿಂದ ನಡೆದ ಸಭೆಯಲ್ಲಿ, ಪರಮೇಶ್ವರ್ ಸಿಎಂ ಆಗಲಿ ಅಂತಾ ಹರಕೆ ಮಾಡಿಕೊಂಡಿರೋ ಹುಣಸೇಮರದಹಳ್ಳಿಯ ವ್ಯಕ್ತಿಯೊಬ್ಬ ಸಿಎಂ ಆಗೋವರೆಗೂ ಗಡ್ಡ ಬೊಳಿಸಲ್ಲಾ ಅಂತಾ ಶಪಥಮಾಡಿದ್ದಾನೆ.ಈ ವ್ಯಕ್ತಿಯ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸೋ ವೇಳೆ ಪರಂ ಭಾವುಕರಾದರು. ಇವತ್ತಿನವರೆಗೂ ಆತ ಹಾಗೆ ಗಡ್ಡ ಬಿಟ್ಟುಕೊಂಡಿದ್ದಾನೆ
ಇದನ್ನೂ ಓದಿ : –.ಹಿಂದುತ್ವ ಇಲ್ಲದ ಹಿಂದು ಶವಕ್ಕೆ ಸಮ – ಸಿದ್ದರಾಮಯ್ಯಗೆ ತಿರುಗೇಟು ನೀಡಿದ CT ರವಿ
ಮೊನ್ನೆ ಅವನಿಗೆ ಹೇಳ್ದೆ, ಯಾಕೋ ಆಗಂಗೆ ಕಾಣಲಪ್ಪ, ಗಡ್ಡ ಬೋಳಿಸು ಅಂತಾ. ಆದರೂ ಆತ ಸುಮ್ಮನಿರಣ್ಣ, ಆಗೇ ಆಗುತ್ತೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದ. ನಾನು ಏನು,
ನನಗೂ ಆತನಿಗೂ ಏನ್ ಸಂಬಂಧ. ನನ್ನ ಬಗ್ಗೆ ಅಷ್ಟೊಂದು ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದಾನಲ್ಲಾ. ನಾನು ಏನು ಕೊಟ್ಟಿದ್ದೀನಿ ಅವನಿಗೆ. ಯಾವತ್ತಿಗೂ ಯಾದವ ಸಮುದಾಯದ ಪ್ರೀತಿಯನ್ನ ಮರೆಯಲ್ಲಾ ಎಂದು ತಮ್ಮ ಭಾಷಣದ ವೇಳೆ ಭಾವುಕರಾಗಿ ಪರಮೇಶ್ವರ್ ಕಣ್ಣೀರು ಹಾಕಿದ್ರು.ಇದನ್ನೂ ಓದಿ : –ಗೌತಮ್ ಅದಾನಿ ಬಿಜೆಪಿಯ ಪವಿತ್ರ ಗೋವು ! ಸಂಜಯ್ ರಾವತ್ ಲೇವಡಿ