ವಿಜಯನಗರ : ಸ್ವಚ್ಛಾ ಭಾರತ ಅಭಿಯಾನಕ್ಕೆ ಶಾಸಕ ಎನ್.ಟಿ ಡಾ.ಶ್ರೀನಿವಾಸ ಪೊರಕೆ ಹಿಡಿದು ಕೆಲಸ ಮಾಡಿದರು. ಕೂಡ್ಲಿಗಿ ಪಟ್ಟಣದ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪಟ್ಟಣದ ಬಸ್ ನಿಲ್ದಾಣ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿಯೇ ಕೆಲಸ ಮಾಡಿದ್ದಾರೆ.
ಸಾಮಾನ್ಯವಾಗಿ ಶಾಸಕರು ಚಾಲನೆ ನೀಡಿ ಹೋಗೋವುದು ನೋಡಿದ್ದೇವೆ ಆದ್ರೆ ಕೂಡ್ಲಿಗಿ ಕ್ಷೇತ್ರದ ಶಾಸಕ ತಾವೇ ಖುದ್ಧಾಗಿ ಪೊರಕೆ ಹಿಡಿದು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ.
ಶಾಸಕರು ಕೆಲಸ ಮಾಡುತ್ತಿರುವುದನ್ನ ನೋಡಿದ ಸ್ಥಳೀಯರು ಸಹ ತಮ್ಮ ಮನೆಗಳಿಂದ ಪೊರಕೆ ತಂದು ಶ್ರಮಧಾನ ಮಾಡಿದ್ದಾರೆ. ಹೀಗೆ ನಗರದಲ್ಲಿ ಮೂರು ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಸ್ವತಃ ಶಾಸಕರೇ ಪೊರೆಕೆ ಹಿಡಿದು ಫೀಲ್ಡಿಗಿಳಿದು ಕೆಲಸ ಮಾಡಲಿದ್ದಾರೆ.
ಶಾಸಕರೇ ಕೆಲಸ ಮಾಡುತ್ತಿರುವುದನ್ನ ನೋಡಿದ ಸ್ಥಳೀಯರು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಿದೆ.