ತುಮಕೂರು : ಮೂರು ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ವಿಚಾರವಾಗಿ ತುಮಕೂರಿನಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ವ್ಯತ್ಯಾಸ ಆಗಿತ್ತು. ರಾಷ್ಟ್ರೀಯ ನಾಯಕರು ಕೆಲ ಮಾನದಂಡ ಅನುಸರಿಸಿದ್ರು. ಹಾಗಾಗಿ ಸೋಲು ಅನುಭವಿಸಬೇಕಾಯಿತು ಅದರ ಬಳಿಕ ಆ ಸೋಲಿನ ಆತ್ಮಾವಲೋಕನ ಮಾಡಿಕೊಂಡ್ವಿ. ಪಂಚರಾಜ್ಯ ಚುನಾವಣೆಯಲ್ಲಿ ಕೆಲಸ ಮಾಡಿದ್ವಿ. ಕೆಲ ಮಾನದಂಡಗಳನ್ನ ಬದಲಾಯಿಸಿ ಕಾರ್ಯಕ್ರಮ ರೂಪಿಸಿದ್ವಿ ಸ್ಥಳೀಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು. ಬಹುಮತದಿಂದ ಮೂರು ರಾಜ್ಯದಲ್ಲಿ ಗೆದ್ದಿದ್ದೇವೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸಗಡ್ದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ರಾಜಸ್ಥಾನದಲ್ಲಿ ಸ್ವಜನ ಪಕ್ಷಪಾತ ವ್ಯಾಪಕ ಭ್ರಷ್ಟಾಚಾರದಿಂದ ಕಾಂಗ್ರೆಸ್ ನೆಲಕಚ್ಚಿದೆ. ನಿನ್ನೆ ಬಂದ ಫಲಿತಾಂಶ ಲೋಕಸಭೆ ಚುನಾವಣೆಯ ಸೆಮಿಫೈನಲ್. ಭಾರತದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯನ್ನ ಜನರು ಭಯಸಿದ್ದಾರೆ ಅನ್ನೋದಕ್ಕೆ ದಿಕ್ಸೂಚಿ ಇದು. ಕಾಂಗ್ರೆಸ್ ನ ಗ್ಯಾರಂಟಿ ಎಲ್ಲೂ ವರ್ಕೌಟ್ ಆಗಿಲ್ಲ. ಗ್ಯಾರಂಟಿ ಯೋಜನೆಯನ್ನ ಕರ್ನಾಟಕದಲ್ಲಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಫೇಲ್ಯೂರ್ ಆಗಿದೆ.