ಬೆಂಗಳೂರು : ಯುಪಿಎ ಮೈತ್ರಿಕೂಟಕ್ಕೆ ಇಂಡಿಯಾ ಎಂಬ ನಾಮಕರಣ ಮಾಡಿದ ತಕ್ಷಣ ಜನರ ಸಮಸ್ಯೆ ಕಡಿಮೆಯಾಗಲ್ಲ, ಹೆಸರು ಬದಲಾವಣೆ ಬಿಟ್ಟು ಇನ್ನೇನು ಅನುಕೂಲ ಆಗಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿ ಹೆಚ್ಡಿಕೆ , ಬೆಂಗಳೂರಿನಲ್ಲಿ ನಿನ್ನೆ ಕಾಂಗ್ರೆಸ್ ಪಕ್ಷದ ದೊಡ್ಡ ಮಟ್ಟದಲ್ಲಿ ವಿಪಕ್ಷ ಸಭೆ ಕರೆದು ಏನ್ ಹೇಳಿದ್ದಾರೆ ಕೇವಲ ಕಾಂಗ್ರೆಸ್ ನವರು ಪ್ರಧಾನಿ ಹುದ್ದೆಯ ಆಕಾಂಕ್ಷಿ ಅಲ್ಲ, ಅದು ಬಿಟ್ಟು ಇನ್ನೇನು ಅವರು ಮಾತನಾಡಿಲ್ಲ ಎಂದು ವ್ಯಂಗ್ಯವಾಗಿದ್ದಾರೆ. ಸಂವಿಧಾನದ ಪ್ರಕಾರ ಇಂಡಿಯಾ ಎಂಬ ಹೆಸರು ಇಡುವಂತಿಲ್ಲ ಎಂಬ ವಾದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.