ಬೀದರ್ : ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಪಾಟೀಲ್ ಕುಟುಂಬದ ಶಾಸಕ, ಎಮ್ಎಲ್ಸಿಗಳ ನಡುವೆ ಕಿತ್ತಾಟ ಮುಂದುವರೆದಿದೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರ ಭಾವಚಿತ್ರ ಹಾಕದೆ ಇರೋದಕ್ಕೆ ಪಾಟೀಲ್ ಕುಟುಂಬಸ್ಥರ ನಡುವೆ ಜಗಳ ನಡೆದಂತಹ ಘಟನೆ ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ. ಬಿಜೆಪಿಯ ಶಾಸಕ ಡಾ:ಸಿದ್ದಲಿಂಗ್ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಭೀಮರಾಮ್ ಪಾಟೀಲ, ಮತ್ತು ಡಾ:ಚಂದ್ರಶೇಖರ ಪಾಟೀಲ ಮಧ್ಯ ಮಾತಿನ ಚಕಮಕಿ ನಡೆದಿದೆ. ದುಬಲಗುಂಡಿ ಗ್ರಾಮದಲ್ಲಿ ಇಂದು ಜೆಜೆಎಂ ಕಾಮಗಾರಿಯ ಭೋಮಿ ಪೋಜೆ ಕಾರ್ಯಕ್ರಮ ನಡೆದಿತ್ತು, ಈ ಕಾರ್ಯಕ್ರಮ ಬ್ಯಾನರ್ ನಲ್ಲಿ ವಿಧಾನ ಪರಿಷತ್ ಸದಸ್ಯರುಗಳ ಪೋಟೋ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರರಾದ ಭೀಮರಾವ್ ಪಾಟೀಲ್ ಹಾಗೂ ಚಂದ್ರಶೇಖರ್ ಪಾಟೀಲ್ ಅವರು ಬಿಜೆಪಿಯ ಶಾಸಕರಾದ ಸಿದ್ದು ಪಾಟೀಲ್ ವಿರುದ್ಧ ಗರಂ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜಶೇಖರ್ ಪಾಟೀಲ್ ವಿರುದ್ಧ ಸ್ಪರ್ಧಿಸಿ ಗೆದ್ದಿರುವ ಸಿದ್ದು ಪಾಟೀಲ್, ರಾಜಶೇಖರ್ ಪಾಟೀಲ್ ಅವರ ಸಹೋದರ ಸಂಬಂಧವು ಆಗಿದ್ದಾರೆ. ಇನ್ನು ಕಾರ್ಯಕ್ರಮದ ಬ್ಯಾನರ್ ನಲ್ಲಿ ಫೋಟೋ ಹಾಕದೆ ಇರೋದಕ್ಕೆ ಪರಿಷತ್ ಸದಸ್ಯರು ಹಾಗೂ ರಾಜಶೇಖರ್ ಪಾಟೀಲ್ ಪುತ್ರ ಅಭಿಷೇಕ್ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗದೆ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ. ಈ ಹಿಂದೆಯೂ ಕೆಲವು ಸರ್ಕಾರಿ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಿ ಗಲಾಟೆಗಳು ನಡೆದಿದ್ದವು. ಆದರೆ ಇವಾಗ ರಾಜಕೀಯ ಸೋಲಿನ ಮನಸ್ತಾಪಗಳು ಬಹಿರಂಗವಾಗಿದೆ