ಬೆಂಗಳೂರು : ಕರ್ನಾಟಕ ಅಂಚೆ ವೃತ್ತದ ವತಿಯಿಂದ ನಾಳೆಯಿಂದ ಜನವರಿ 8ರವರೆಗೆ ನಗರದ ಕಂಠೀರದ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಪೆಕ್ಸ್ 2024 ಅಂಚೆ ಚೀಟಿಗಳ ಹಬ್ಬ ಮತ್ತು 13ನೆ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನವನ್ನು ಆಯೋಜಿಸಲಾಗಿದೆ.
ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನವು 2019ರಲ್ಲಿ ಮಂಗಳೂರಿನಲ್ಲಿ ಜರುಗಿತು . ಈ ಬಾರಿಯ ಕರ್ನಾಪೆಕ್ಸ್-2024 ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಅಂಚೆ ಚೀಟಿ ಸಂಗ್ರಹಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಜನಪ್ರಿಯಗೊಳಿಸಲು ಹಾಗೂ ಅಂಚೆ ಚೀಟಿ ಸಂಗ್ರಹಣಕಾರರಿಗೆ ಅವಕಾಶ ನೀಡಲು ಇದರ ಉದ್ದೇಶವಾಗಿದೆ.
ಈ ಪ್ರದರ್ಶನದಲ್ಲಿ ಇತಿಹಾಸ, ಸಂಸ್ಕೃತಿ, ಕಲೆ, ಪರಂಪರೆ, ವಿಜ್ಞಾನ, ತಂತ್ರಜ್ಞಾನ, ವನ್ಯಜೀವಿಗಳು, ಸಸ್ಯ ಸಂಪತ್ತು ಮುಂತಾದ ವಿಷಯಗಳನ್ನು ಅಂಚೆ ಚೀಟಿಗಳು, ವಿಶೇಷ ಲಕೋಟೆಗಳು, ವಿಶೇಷ ಮತ್ತು ಸಚಿತ್ರ ಪದ್ದತಿಗಳ ಅಪರೂಪ ಮತ್ತು ವಿಭಿನ್ನ ಸಂಗ್ರಹಗಳನ್ನು ಪ್ರದರ್ಶಿಸಲಾಗುವುದು ಎಂದು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಎಂದರು.