ಬೆಂಗಳೂರು : ಅಯೋಧ್ಯೆಯಲ್ಲಿ ಜನೇವರಿ 22ರಂದು ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ ಈ ದಿನದ ಸಂಭ್ರಮ ಹಬ್ಬದಂತೆ ಹಿಂದೂಗಳ ಮನಸ್ಸಿನಲ್ಲಿ ಹೆಚ್ಚುತ್ತಿದೆ. ಈ ದಿನವನ್ನು ಮತಷ್ಟು ವಿಶೇಷವಾಗಿಸಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದರಂತೇಯೇ ಗರ್ಭಿಣಿಯರು ಅದೇ ದಿನ ಹೆರಿಗೆ ಮಾಡಿಕೊಂಡರೆ ತಮ್ಮ ಮನೆಗೆ ರಾಮನೇ ಬರಬಹುದು ಎಂದು ಯೋಚಿಸುತ್ತಿದ್ದು ಜನೇವರಿ 22 ರಂದೇ ಡೆಲಿವರಿಗೆ ಡೇಟ್ ಕೇಳ್ತೀದ್ದಾರೆ..
ಕೋಟ್ಯಾಂತರ ಭಾರತೀಯರ ಕನಸ್ಸು ಪ್ರಭು ಶ್ರೀರಾಮ ಮಂದಿರ ನಿರ್ಮಾಣ.. ಇದಕ್ಕೆ ಈಗ ಕಾಲ ಕೂಡಿ
ಬಂದಿದೆ.. ಜನವರಿ 22 ಭಾರತದ ಇತಿಹಾದ ಪುಟಗಳಲ್ಲಿ ಅಚ್ಚಾಗುವ ದಿನ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠಯಾಗುವ ಶುಭ ಗಳಿಗೆ. ಅದರಲ್ಲೂ ಅಂದು ಬಾಲ ರಾಮನ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ದಿನದ ಸಂಭ್ರಮ ದೇಶಾದ್ಯಂತ ಹಿಂದೂಗಳಲ್ಲಿ ಈಗಾಗಲೇ ಮನೆ ಮಾಡಿದೆ. ಮನೆಮನೆಗೆ ಅಯೋಧ್ಯೆಯಿಂದ ಈಗಾಗಲೇ ಅಕ್ಷತೆ ಬಂದು ತಲುಪುತ್ತಿದೆ. ಜೊತೆಗೆೇ ಕೆಲವರು ಅಯೋಧ್ಯೆಗೆ ಹೋಗಲು ಪ್ಲಾನ್ ಮಾಡ್ತೀದ್ದಾರೆ. ಕೆಲವರು ಅಂದು ರಾಮ ಭಜನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ, ಮತ್ತೆ ಕೆಲವರು ಆ ದಿನ ರಾಜ ಜ್ಯೋತಿ ಬೆಳಗಿ ದೀಪಾವಳಿಯಾಗಿವಿಶೇಷವಾಗಿಸಬೇಕೆಂದುಕೊಂಡಿದ್ದಾರೆ. ಈ ನಡುವೆ ಗರ್ಭಿಣಿ ಮಹಿಳೆಯರು ಈ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ತಮ್ಮ ಮಗುವಿಗೆ ಅಂದೇ ಜನ್ಮ ನೀಡುವ ಆಸೆಯಿಂದ ಜನೇವರಿ 22 ಕ್ಕೆ ಡೆಲಿವರಿ ಡೇಟ್ ನೀಡುವಂತೆ ವೈದ್ಯರ ಬಳಿ ರಿಕ್ವೇಸ್ಟ್ ಮಾಡ್ತೀದ್ದಾರೆ
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಬರುವ ದಿನವೇ ತಮಗೆ ಹೆರಿಗೆಯಾದರೆ ಮನೆಗೆ ಶ್ರೀ ರಾಮನ ಆಗಮನವೇ ಆಗಬಹುದು ಹೆಣ್ಣಾದ್ರೆ ಸೀತಾ ಮಾತೆಯೇ ಬರಬಹುದು ಎಂಬ ಆಸೆ ಗರ್ಭಿಣಿಯರಲ್ಲಿ ಚಿಗುರೊಡೆಯುತ್ತಿದೆ. ಕೆಲವರು ಈ ದಿನ ವಿಶೇಷವಾಗಿದೆ ಎಂಬ ಕಾರಣಕ್ಕಾಗಿಯೂ ದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲೂ ಅದೇ ದಿನ ಮಗು ಹೆರಲು ನಿರ್ಧರಿಸುತ್ತಿದ್ದಾರೆ.. ಗರ್ಭಿಣಿಯರು ಈಗಾಗಲೇ ತಮ್ಮ ವೈದ್ಯರನ್ನು ಬಳಿ ಈರೀತಿ ಮನವಿ ಮಾಡ್ತೀದ್ದಾರೆ. ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠೆಯಂದು ಹೆರಿಗೆಯಾದರೆ, ಅದು ನಮ್ಮ ಕುಟುಂಬಕ್ಕೆ ಸ್ಮರಣೀಯ ಕ್ಷಣವಾಗಿರುತ್ತದೆ ಅಂತಿದ್ದಾರೆ
ಗರ್ಭಿಣಿಯರು ಈಗಾಗಲೇ ಜನವರಿ ಅಂತ್ಯದಲ್ಲಿ ಅಥವಾ ಮಧ್ಯದಲ್ಲಿ ಹೆರಿಗೆ ಡೇಟ್ ಇರುವ ಮಹಿಳೆಯರು ಆಸ್ಪತ್ರೆಗೆ ಹೋಗಿ ಜನೇವರಿ 22 ದಿನಾಂಕದಂದೇ ತಮಗೆ ಸಿಸೇರಿಯನ್ ಹೆರಿಗೆ ಮಾಡಿಸಬಹುದೇ ಎಂದು ವಿಚಾರಿಸುತ್ತಿದ್ದಾರೆ. ಇನ್ನು ಈ ಬಗ್ಗೆ ವೈದ್ಯರು ಮಾತ್ರ ಎಲ್ಲರಿಗೂ ಅವತ್ತೆ ಹೆರಿಗೆ ಮಾಡಿಸುವುದು ಕಷ್ಟ.. ಹೆರಿಗೆಗ ನಿಗಧಿಯಾದ ದಿನಗಳು ತುಂಬಿದ ಮಹಿಳೆಯರಿಗೆ ಮಾತ್ರ ಈ ರೀತಿ ಹೆರಿಗೆ ಮಾಡಲು ಅವಕಾಶ ಇದೆ ಆದ್ರ ಒಂದು ವಾರಗಳ ಕಾಲಾವಕಾಶದಲ್ಲಿ ಮಾತ್ರ ಈ ರೀತಿ ಮಾಡಿಕೊಳ್ಳಲು ಅವಕಾಶ ಇದೆ ಅತಂವರಿಗೆ ಮಾತ್ರ ಮಾಡಬಹುದು ಅಂತಿದ್ದು ಎಲ್ಲರಿಗೂ ಅಂದೆ ಮಾಡಲು ಸಾಧ್ಯವಿಲ್ಲ ಗರ್ಭಿಣಿಯರ ಆರೋಗ್ಯ ತುಂಬಾ ಮುಖ್ಯ ಅಂತಿದ್ದಾರೆ
ಒಟ್ನಲ್ಲಿ ಎಲ್ಲಡೆ ರಾಮಮಂದಿರ ಪ್ರತಿಷ್ಠಾಪನೆಯ ಜ್ವರ ಹೆಚ್ಚಾಗಿದ್ದು, ಜನವರಿ 22 ರ ಶುಭ ದಿನಾಂಕದಂದು ಗರ್ಭಿಣಿಯರು ಮಗುವಿಗೆ ಜನ್ಮ ನೀಡುವಂತೆ ವೈದ್ಯರಲ್ಲಿ ವಿನಂತಿಸುತ್ತಿದ್ದಾರೆ. ಇನ್ನು ಕಲವು 9 ತಿಂಗಳು ತುಂಬಿರುವ ಗರ್ಭಿಣಿಯರಂತು
ಅಂದು ನಾರ್ಮಲ್ ಹೆರಿಗೆಯಾಗದೆ ಇದ್ರೆ ಸಿಸೇರಿಯನ್ ಮಾಡಿಸುವ ಪ್ಲಾನ್ ಕೂಡಾ ಮಾಡಿಸಲು ಪ್ಲಾನ್ ಮಾಡ್ತೀದ್ದಾರೆ ಅದೇನೇ ಇರಲಿ ಜನೇವರಿ 22 ರಂದೆ ಹೆರಿಗೆ ಮಾಡಿಸುವ ಹಠದಲ್ಲಿ ಅಪಾಯ ತಂದುಕೊಳ್ಳದೆ ಗರ್ಭಿಣಿಯರು ವೈದ್ಯರ ಸಲಹೆ ಸೂಚನೆ ಪಡೆದು ಮುಂದುವರೆಯುವುದು ಸೂಕ್ತ
ವರದಿ : ವರ್ಷಿತಾ ತಾಕೇರಿ