ಬೆಂಗಳೂರು :ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಖಂಡಿಸಿ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದು, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲು ಮಾಡಲಾಗ್ತಿದೆ. ಸುಳ್ಳು ಕೇಸ್ ದಾಖಲಿಸುವ ಮೂಲಕ ಥಳಿಸುವ ಕೆಲಸ ಆಗುತ್ತಿದೆ. ಯುವ ಬ್ರಿಗೇಡ್ ನ ಕಾರ್ಯಕರ್ತನ ಹತ್ಯೆ ನಡೆದಿರೋದು ಖಂಡನೀಯ ಎಂದು ಕಿಡಿ ಕಾರಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಜೈನಮುನಿ ಹತ್ಯೆ ಮಾಡಿದ ಹಂತಕನನ್ನ ಬಂಧಿಸಬೇಕು. ನಾಗರಕಟ್ಟೆಯ ಪೂಜೆಗೂ ಪೊಲೀಸರು ನೊಟೀಸ್ ನೀಡುವುದು ಸರಿಯಲ್ಲ ಅಂತ ಅಸಮಧಾನ ವ್ಯಕ್ತಪಡಿಸಿದ್ದಲ್ಲದೇ, ರಾಜ್ಯದಲ್ಲಿ ಹಿಂದೂಗಳು ಜೀವಿಸಲು ಉತ್ತಮ ವಾತಾವರಣ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವ ಜತೆಗೆ ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹ ಮಾಡಿದ್ದಲ್ಲದೇ ವಕ್ಫ್ ಬೋರ್ಡದ ವಶಪಡಿಸಿಕೊಂಡ ಭೂಮಿಯನ್ನ ಮೂಲ ಮಾಲೀಕರಿಗೆ ನೀಡಬೇಕು. ಇತಿಹಾಸದಲ್ಲಿ ವೀರ ಸಾವರ್ಕರ್ ಪಠ್ಯವನ್ನ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಕಾರ್ಯದರ್ಶಿ ಮೋಹನ್ ಗೌಡ ರಾಷ್ಟ್ರ ರಕ್ಷಣಾ ಪಡೆತ ಪುನೀತ್ ಕೆರೆಹಳ್ಳಿ ಉಪಸ್ಥಿತರಿದ್ದರು.