ಒಡಿಶಾ: ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಹೊಸ ಡ್ರೆಸ್ ಕೋಡ್ ನಿಯಮವನ್ನು ಜಾರಿಗೆ ತಂದಿದ್ದು ಮುಂದಿನ ಸೋಮವಾರದಿಂದಲೇ ವಸ್ತ್ರ ಸಂಹಿತೆನಿಯಮ ಪಾಲಿಸಬೇಕೆಂದು ಭಕ್ತಾಧಿಗಳಲ್ಲಿ ಮನವಿ ಮಾಡಿದೆ ಎಂದು ವರದಿಯಾಗಿದೆ.
ಒಡಿಶಾದಲ್ಲಿರುವ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ಆಗಮಿಸುವ ಭಕ್ತರೇ ಇನ್ಮುಂದೆ ಹಾಫ್ ಪ್ಯಾಂಟ್, ಶಾರ್ಟ್ಸ್, ರಿಪ್ಡ್ ಜೀನ್ಸ್, ಸ್ಕರ್ಟ್ ಮತ್ತು ಸ್ಲೀವ್ಲೆಸ್ ಡ್ರೆಸ್ಗಳನ್ನು ಧರಿಸಿದವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ. ಸಭ್ಯ ಉಡುಪುಗಳಾದ ಪುರುಷರು ಧೋತಿಗಳು, ಪಂಚೆ ಧರಿಸಬೇಕು ಅಲ್ಲದೇ ಮಹಿಳೆಯರು ಹೆಚ್ಚಾಗಿ ಸೀರೆ ಅಥವಾ ಸಲ್ವಾರ್ ಕಮೀಜ್‌ಗಳಲ್ಲಿ ಧರಿಸಬೇಕಾಗಿದೆ. ಅಷ್ಟೇ ಅಲ್ಲದೇ ಇನ್ನೂ ದೇವಸ್ಥಾನದೊಳಗೆ ಗುಟ್ಕಾ ಅಥವಾ ಯಾವುದೇ ತಂಬಾಕು ಉತ್ಪನ್ನಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಖಡಕ್ ಸೂಚನೆ ನೀಡಿದ್ದಾರೆ.