ಬೆಂಗಳೂರು : ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಾಸಕಾಂಗ ಪಕ್ಷ ಸಭೆಯಲ್ಲಿ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ(R Ashoka) ಅವರಿಗೆ ವಿಪಕ್ಷ ನಾಯಕ ಪಟ್ಟವನ್ನು ಘೋಷಣೆ ಮಾಡಲಾಯಿತು.
ಜಾಲಹಳ್ಳಿ ರಾಮಯ್ಯ ಅಶೋಕ ಇವರ ಪೂರ್ಣ ಹೆಸರಾಗಿದ್ದು, ರಾಮಯ್ಯ-ಆಂಜಿನಮ್ಮ ದಂಪತಿ ಮಗನಾಗಿ 1957 ಜುಲೈ 1 ರಂದು ಜಾಲಹಳ್ಳಿಯಲ್ಲಿ ಜನಿಸುತ್ತಾರೆ. ಜಾಲಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಆರ್ ಅಶೋಕ್, ಬಳಿಕ ವಿವಿಪುರಂ ನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮಾಡುತ್ತಾರೆ. ಹಲವು ದಿನಗಳ ಬಳಿಕ ಬಿಜೆಪಿ ವಿಪಕ್ಷ ನಾಯಕನ ಪಟ್ಟವನ್ನು ಘೋಷಣೆ ಮಾಡಿದ್ದಾರೆ. ಇದೀಗ ಮತ್ತೆ ಬಿಜೆಪಿ ಪಾಳಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋದಕ್ಕೆ ಭಾರೀ ರಣತಂತ್ರ ರೂಪಿಸಲಾಗುತ್ತಿದೆ.