ಬೆಂಗಳೂರು : ಜನವರಿ 22 ರಂದು ಮಧ್ಯಾಹ್ನ 12.20 ಕ್ಕೆ ಅಯೋಧ್ಯೆ ರಾಮಮಂದಿರದಲ್ಲಿ ರಾಮ್ ಲಲ್ಲಾನ ಪ್ರತಿಷ್ಠಾಪನೆ ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೋಮವಾರ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ಪ್ರಾಣ ಪ್ರತಿಷ್ಠೆ ಮಧ್ಯಾಹ್ನ 12.20ಕ್ಕೆ ನಡೆಯಲಿದ್ದು, ಬಳಿಕ ಆರತಿ ಮಾಡಿ, ಸ್ಥಳೀಯ ಹಾಗೂ ಮಾರುಕಟ್ಟೆಗಳಲ್ಲಿ ಪ್ರಸಾದ ವಿತರಣೆ ಮಾಡಿ, ಸೂರ್ಯಾಸ್ತದ ನಂತರ ದೀಪ ಹಚ್ಚಲಾಗುವುದು. ಇಡೀ ಜಗತ್ತಿಗೆ ಇದೇ ರೀತಿಯ ಮನವಿಯನ್ನು ಪ್ರಧಾನಿ ಮಾಡಿದ್ದಾರೆ” ಎಂದಿದ್ದಾರೆ.
ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಯೋಧ್ಯೆಯಲ್ಲಿ ಸೋಮವಾರ ನಡೆದ ‘ಅಕ್ಷತ್’ ವಿತರಣಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ರಾಯ್ ಭಾಗವಹಿಸಿದ್ದರು.