ಉತ್ತರಾಖಂಡ : ಉತ್ತರಕಾಶಿ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ್ದು, 12 ದಿನಗಳ ಕಾರ್ಯಾಚರಣೆ ಬಳಿಕ ಮಣ್ಣಿನಡಿ ಸಿಲುಕಿದ 41 ಕಾರ್ಮಿಕರನ್ನು ರಕ್ಷಣೆಗೆ ಮುಂದಾಗಿದ್ದಾರೆ.
ಉತ್ತರಕಾಶಿ ಸಿಲ್ಕ್ಯಾರಾ ಸಿಲ್ಕ್ಯಾರಾ ಸುರಂಗ ಕುಸಿದಿದ್ದು, ಅದರಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದರು ಉತ್ತರ ಕಾಶಿ ಜಿಲ್ಲೆಯ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಸುರಂಗವನ್ನು ನಿರ್ಮಿಸಲಾಗುತ್ತಿತ್ತು. ಈ ವೇಳೆ ಏಕಾಏಕಿ ಸುರಂಗ ಕುಸಿತಗೊಂಡಿದೆ.
ಕೂಡಲೇ ರಕ್ಷಣಾ ಕಾರ್ಯಾಚರಣೆ ತೊಡಗಿದ್ದಾರೆ. ಸುರಂಗದೊಳಗೆ ಕುಸಿದ ಸ್ಥಳದಲ್ಲಿ ಸಂಗ್ರಹವಾದ ಅವಶೇಷಗಳ ಮೂಲಕ ಅಮೇರಿಕನ್ ಆಗರ್ ಯಂತ್ರದ ಮೂಲಕ ಕೊರೆಯಲಾಗಿದೆ. ಒಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಅದು ಮಧ್ಯಾಹ್ನದ ವೇಳೆಗೆ 50 ಮೀಟರ್ ಪೈಪ್ ಕೊರೆಯಲಾಗಿದೆ.
57 ಮೀಟರ್ ಆಳದಲ್ಲಿ ಕಾರ್ಮಿಕರು ಸಿಲಿಕಿದ್ದಾರೆ. ಸಿಬ್ಬಂದಿಗಳು, ಆಕ್ಸಿಜನ್, ಹಗ್ಗಗಳು ಮತ್ತು ಸ್ಟ್ರೆಚರ್‌ಗಳೊಂದಿಗೆ ಸುರಂಗದೊಳಗೆ ಹೋಗಿದ್ದರು ಇದೀಗ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಚರಣೆ 12 ದಿನಗಳ ಅಂತಿಮ ಹಂತಕ್ಕೆ ತಲುಪಿದೆ.
ಇನ್ನು ಕೆಲವೇ ಗಂಟೆಗಳಲ್ಲಿ ಕಾರ್ಮಿಕರನ್ನು (Workers Rescue)ಸುರಕ್ಷಿತವಾಗಿ ಹೊರಗೆ ಕರೆತರುವ ಸಾಧ್ಯತೆ ಇದೆ. ಸಿಲ್ಕ್ಯಾರಾ ಸುರಂಗದಿಂದ ಹೊರ ಬಂದ ಕೂಡಲೇ ಕಾರ್ಮಿಕರಿಗೆ ಚಿಕಿತ್ಸೆ ನೀಡಲು 41 ಹಾಸಿಗೆಗಳ ಆಸ್ಪತ್ರೆಯನ್ನು ಬುಧವಾರ ಸಿದ್ಧಪಡಿಸಲಾಗಿದೆ. ಅವರನ್ನು ಸಾಗಿಸಲು 30 ಆಂಬ್ಯುಲೆನ್ಸ್‌ಗಳನ್ನು ಸುರಂಗದ ಪಕ್ಕದಲ್ಲೇ ನಿಲ್ಲಿಸಲಾಗಿದೆ