ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಹಲವು ಸೆಲೆಬ್ರಿಟಿಗಳು ಈಗಾಗಲೇ ಅಯೋಧ್ಯೆ ತಲುಪಿದ್ದಾರೆ. ರಿಷಬ್ ಶೆಟ್ಟಿ ಕೂಡ ಈ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ತೆರಳಿದ್ದಾರೆ. ಅಯೋಧ್ಯೆಗೆ ತೆರಳಿರುವ ನಟ, ನಿರ್ದೇಶಕ ರಿಷಭ್ ಶೆಟ್ಟಿ, ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಮೊದಲು ಅಲ್ಲಿರುವ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ರಿಷಬ್ ಶೆಟ್ಟಿ ಜೊತೆ ಅವರ ಪತ್ನಿಯೂ ಅಯೋಧ್ಯೆಗೆ ತೆರಳಿದ್ದು, ರಿಷಬ್ ಅವರು ಹೆಗಲಿಗೆ ಶಾಲು, ಹಣೆಗೆ ಅರಿಶಿಣದ ಪಟ್ಟಿ ಬಳಿದುಕೊಂಡಿದ್ದಾರೆ.
‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆʼ ಯ ಸಂಭ್ರಮಕ್ಕೂ ಮುನ್ನ ʼಹನುಮನ ದರ್ಶನ’ ಎಂದು ಅವರು ಎಕ್ಸ್ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.