ಚಾಮರಾಜನಗರ : ಇಂದಿನಿಂದ ಮತ್ತೊಂದು ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪಿ.ಜಿ.ಪಾಳ್ಯ ಸಮೀಪ ಸಫಾರಿ ಆರಂಭಗೊಂಡಿದೆ.
ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರು ಮಹದೇಶ್ವರ ವನ್ಯಧಾಮದ ಸಫಾರಿಗೆ ಚಾಲನೆ ನೀಡಿದರು. ಇದರೊಂದಿಗೆ ಇದು ಚಾಮರಾಜನಗರ ಜಿಲ್ಲೆಯ ನಾಲ್ಕನೇ ಸಫಾರಿ ಕೇಂದ್ರವಾಗಿದೆ. ಈಗಾಗಲೇ ಬಂಡೀಪುರ, ಬಿಆರ್ಟಿಯ ಕೆ.ಗುಡಿಯಲ್ಲಿ ಸಫಾರಿ ವ್ಯವಸ್ಥೆ ಇದೆ. ಹಾನೂರು ತಾಲೂಕಿನ ಕಾವೇದಿ ವನ್ಯಧಾಮದ ಗೋಪಿನಾಥಂನಲ್ಲಿ ಪ್ರಯೋಗಿಕವಾಗಿ ಸಫಾರಿ ಆರಂಭವಾಗಿದೆ
ಬೆಳಿಗ್ಗೆ 6 ರಿಂದ 9 ಗಂಟೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ಸಫಾರಿ ಸಮಯ ನಿಗದಿಪಡಿಸಲಾಗಿದೆ. ಇನ್ನು ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ 200 ರೂಪಾಯಿ ಸಫಾರಿ ದರ ನಿಗದಿಗೊಳಿಸಲಾಗಿದೆ. ಇದರ ಜೊತೆ ವಾಹನ ಪ್ರವೇಶಕ್ಕೆ 100 ಶುಲ್ಕ ಫಿಕ್ಸ್ ಮಾಡಲಾಗಿದೆ.