ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ (SANDESH NAGARAJ)ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ (JDS) ಪಕ್ಷದ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿದ್ದ ಸಂದೇಶ್ ನಾಗರಾಜ್, ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಮತ್ತೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು.
ಅಂತಿಮ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದರಿಂದ ಸ್ಪರ್ಧೆಯಿಂದ ವಂಚಿತರಾಗಿದ್ದರು. ಈಗ ಮತ್ತೆ ಬಿಜೆಪಿ ಬಿಡುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಬಹಳ ವರ್ಷಗಳ ಹಿಂದೆ ಸಂದೇಶ್ ನಾಗರಾಜ್ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಇದನ್ನುಓದಿ :- ಚಿಕ್ಕಮಗಳೂರು- ಸಿ.ಟಿ.ರವಿ ವಿರುದ್ಧ ಕಣಕ್ಕಿಳಿಯುವಂತೆ ಸಿದ್ದರಾಮಯ್ಯಗೆ ಆಹ್ವಾನ ನೀಡಿದ ಅಭಿಮಾನಿ
ಅನಂತರ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಜೆಡಿಎಸ್ ಸೇರಿ MLC ಆದರು. ಆದ್ರೆ ಕುಮಾರಸ್ವಾಮಿ ಜೊತೆಗಿನ ವೈಮನಸ್ಸಿಂದ ಪಕ್ಷ ತೊರೆಯುವ ಸ್ಥಿತಿ ನಿರ್ಮಾಣವಾಯ್ತು. ಸಾರಾ ಮಹೇಶ್ ಮೇಲೆ ತೀವ್ರ ಅಸಮಾಧಾನ ಹೊಂದಿದ್ದ ಸಂದೇಶ್ ನಾಗರಾಜ್ ಬಹಿರಂಗವಾಗಿಯೇ ಸಮರ ಸಾರಿದ್ದರು.
ಇದನ್ನುಓದಿ :- ಕಾಂಗ್ರೆಸ್ ಹಿರಿಯ ಮುಖಂಡ ಕೆ.ಸಿ ಕೊಂಡಯ್ಯಗೆ ಶೋಕಾಸ್ ನೋಟಿಸ್…!