ಬೆಂಗಳೂರು : ರಾಜ್ಯದ ರೈತರ ಪಾಲಿನ ಸಂಕಷ್ಟಗಳು ಬಗೆ ಹರಿಯುತ್ತಿಲ್ಲ. ಸತತ ಬರ ಅಥವಾ ಪ್ರವಾಹದಿಂದ ನಾಡಿನ ಅನ್ನದಾತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ವರ್ಷವು ಕೂಡ ರಾಜ್ಯದಲ್ಲಿ ಕಂಡು ಕೇಳರಿಯದ ಭೀಕರ ಬರದಿಂದಾಗಿ ಅನ್ನದಾತರು ಕಂಗಾಗಿದ್ದು, ಅನ್ನದಾತರಿಗೆ ಕೈಹಿಡಿಯಬೇಕಾದ ನಾಯಕರುಗಳು ಹಬ್ಬದ ಮೋಜು ಮಸ್ತಿಯಲ್ಲಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.
ಎಸ್ ಈ ಬಾರಿ ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದು, ಬರದ ಪರಸ್ಥಿತಿ ಇದೆ. ಪ್ರತಿ ವರ್ಷ ಈ ಸಮಯದಲ್ಲಿ ಅನ್ನದಾತರು ತಮ್ಮ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತಡಗಿರುತ್ತಿದ್ರು, ಆದರೆ ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆಯಿಂದ ರಾಜ್ಯದೆಲ್ಲಡೆ ಬರಗಾಲ ಉಂಟಾಗಿದೆ. ಇದರಿಂದ ರಾಜ್ಯದ ಅನ್ನದಾತರು ಬಿತ್ತನೆ ಮಾಡದೇ ಕಂಗಾಲಾಗಿದ್ದಾರೆ.ಇನ್ನೂ ರಾಜ್ಯ ಸರ್ಕಾರ ಮಳೆ ಕೊರತೆಯನ್ನು ಆಧರಿಸಿ ಮೊದಲಿಗೆ 161 ತೀವ್ರ ಹಾಗೂ 34 ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿತ್ತು. ಎರಡನೇ ಪಟ್ಟಿಯಲ್ಲಿ 21 ತಾಲೂಕುಗಳನ್ನು ಬರಪೀಡಿತವೆಂದು ಸೇರಿಸಿದೆ. ಪ್ರತಿವರ್ಷ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 111 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾದರೆ, ಈ ವರ್ಷ 67.95 ಲಕ್ಷ ಹೆಕ್ಟೇರ್ನಲ್ಲಿ ಆಗಿದ್ದು, ಬಿತ್ತನೆಯಾಗದಿರುವ ಪ್ರದೇಶವನ್ನು ನಷ್ಟಕ್ಕೆ ಸೇರಿಸಬೇಕಾಗಿದೆ ಎಂಬ ಒತ್ತಾಯವೂ ಇದೆ. ಬಿತ್ತನೆ ಯಾಗಿರುವ ಪ್ರದೇಶವನ್ನು ಕೂಡ ಬರಪೀಡಿತ ಪಟ್ಟಿಗೆ ಸೇರಿಸಬೇಕು. ಬಿತ್ತನೆಯಾಗಿರುವ ಪ್ರದೇಶದಲ್ಲಿ ಮಳೆಯಾಗದಿರುವ ಕಾರಣ ಉತ್ತಮ ಗುಣಮಟ್ಟದ ಧಾನ್ಯಗಳು ಬೆಳೆಯೋದಕ್ಕೆ ಆಗೋದಿಲ್ಲ ಹೀಗಾಗಿಬಿತ್ತನೆ ಯಾಗಿರುವ ಪ್ರದೇಶವು ಕೂಡ ಬರಗಾಲಪೀಡಿತ ಪಟ್ಟಿಗೆ ಸೇರಿಸಬೇಕೆಂದು ಅನ್ನದಾತರು ಒತ್ತಾಯಿಸಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದು ಸರ್ಕಾರ ಏನೋ ಕಾಟಾಚಾರಕ್ಕೆ ರಾಜ್ಯದ ಕೆಲ ಜಿಲ್ಲೆ ಹಾಗೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ. ಇತ್ತ ರಾಜ್ಯದಲ್ಲಿ ಅನ್ನದಾತರು ಬಿತ್ತನೆ ಮಾಡಿದ ಬೆಳೆಗಳು ಮಳೆ ಬರದೇ ಒಣಗಿ ನಿಂತಿದ್ದು, ಅನ್ನದಾತರಿಗೆ ತಿನ್ನೋಕ್ಕು ಇಲ್ಲದ ಪರಸ್ಥಿತಿ ಎದುರಾಗಿದೆ. ಸರ್ಕಾರ ಬೆಳೆ ಹಾನಿಯನ್ನಷ್ಟೇ ಲೆಕ್ಕ ಹಾಕುತ್ತಿದೆ. ಆದರೆ ಉಳುಮೆ, ರಸಗೊಬ್ಬರ, ಬಿತ್ತನೆ ಬೀಜ, ರೈತರ ಶ್ರಮ, ವೆಚ್ಚವನ್ನು ಪರಿಗಣಿಸಿಲ್ಲ. ಅದೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡು ನಷ್ಟದ ಅಂದಾಜು ಮಾಡಬೇಕು ಎಂಬ ಬೇಡಿಕೆ ಇದೆ. ಇನ್ನು ರಾಜ್ಯ ಸರ್ಕಾರ ಏನು ಕಾಟಾಚಾರಕ್ಕೆ ಬರಪೀಡಿತ ಘೋಷಣೆ ಎಂದು ತಾಲೂಕುಗಳನ್ನ ಘೋಷಣೆ ಮಾಡಿದೆ, ಆದರೆ ರಾಜ್ಯದಲ್ಲಿ ಸಮರ್ಪಕ ವಿದ್ಯುತ್ ಕುಡಿಯುವ ನೀರು ದನ ಕರುಗಳಿಗೆ ಮೇವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ನಾಡಿನ ಅನ್ನದಾತರು ಸಂಕಷ್ಟದಲ್ಲಿದ್ದು, ಇಂಥ ಸಂದರ್ಭದಲ್ಲಿ ರಾಜಕಾರಣಿಗಳು ಉತ್ಸಾಹದಿಂದ ಹಬ್ಬದಲ್ಲಿ ತೊಡಗಿದ್ದಾರೆ.ಇನ್ನೂ ರಾಜ್ಯದಲ್ಲಿ ಬರದ ಪರಸ್ಥಿತಿ ಇದ್ದರು ಅನ್ನದಾತರ ಪರಸ್ಥಿತಿ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಎಂದು ರೈತ ಪರ ಹೋರಾಟಗಾರ ಕುರುಬರು ಶಾಂತಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅದೇನೇ ಇರಲಿ ರಾಜ್ಯದಲ್ಲಿ ಮಳೆ ಬಾರದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದು, ಬರ ಘೋಷಣೆ ಮಾಡಿರುವ ರಾಜ್ಯ ಸರಕಾರ ಬರಪೀಡಿತ ತಾಲೂಕುಗಳಿಗೆ ಆದಷ್ಟು ಬೇಗ ಹಣ ಬಿಡುಗಡೆ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರನ್ನ ಕೈ ಹಿಡಿಯುವ ಕೆಲಸ ಮಾಡಬೇಕೆಂಬುದೇ ನಮ್ಮ ಆಶಯ..
ವರದಿ : ಮಂಜುನಾಥ್, ಬೆಂಗಳೂರು