ರಾಜ್ಯದಲ್ಲಿ ಶ್ರೀ ಶಕ್ತಿ ಯೋಜನೆ ಎಫೆಕ್ಟ್ ಮೂರು ವಾರದಲ್ಲಿ ಹತ್ತು ಕೋಟಿ ಮಹಿಳೆಯರ ಪ್ರಯಾಣ ಮಾಡಿದ್ದು, ಮಹಿಳೆಯರ ಟಿಕೆಟ್‌ಗೆ 248.30 ಕೋಟಿ ರೂ. ವೆಚ್ಚವಾಗಿದೆ.
ಕರ್ನಾಟಕ : ರಾಜ್ಯದಲ್ಲಿ ಈವರೆಗೂ 10.54 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆ ಜಾರಿ ನಂತರ ರಾಜ್ಯದ ನಾಲ್ಕೂ ನಿಗಮಗಳ `ಬಸ್‌ನಲ್ಲಿ ಪ್ರಯಾಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಕ್ತಿ ಯೋಜನೆಗೂ ಮುನ್ನ ನಿತ್ಯ ಸರಾಸರಿ 84.91 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದಾರೆ. ಆದರೀಗ ಸರಾಸರಿ 1.09 ಕೋಟಿ ಜನರ ಸಂಚಾರ, ಆದಾಯದಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಯೋಜನೆ ಜಾರಿಗೂ ಮುನ್ನ ಪ್ರತಿದಿನ ಸರಾಸರಿ 24.48 ಕೋಟಿ ರೂ. ಆದಾಯ, ಈಗ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ ನಿತ್ಯ ಸರಾಸರಿ 28.89 ಕೋಟಿ ರೂ ಇರುತ್ತಿತ್ತು. ಒಟ್ಟಾರೆಯಾಗಿ 4.41 ಕೋಟಿ ರೂಗಳಷ್ಟು ಆದಾಯ ಹೆಚ್ಚಾಗುವಂತಾಗಿದೆ.