ಬೆಂಗಳೂರು: ಓಲಾ ಊಬರ್‍ಗೆ ಶಕ್ತಿ ಬಿಸಿ ತಟ್ಟಿದೆ. ಊಬರಲ್ಲಿ ಪ್ರಯಾಣ ಮಾಡೋರು ಈಗ ಬಿಎಂಟಿಸಿ ಕಡೆ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಶಕ್ತಿ ಯೋಜನೆಗೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗ್ತಿದೆ. ಕೆಲವೆಡೆ ಜನರಿಂದ ವಿರೋಧವೂ ವ್ಯಕ್ತವಾಗ್ತಿದೆ. ಈ ನಡುವೆ ಶಕ್ತಿ ಯೋಜನೆಯ ಎಫೆಕ್ಟ್ ಓಲಾ, ಊಬರ್ಗೂ ತಟ್ಟಿದ್ದು, ಬುಕ್ಕಿಂಗ್ನಲ್ಲಿ ಶೇ.30 ರಷ್ಟು ಇಳಿಕೆಯಾಗಿದೆ . ಹೌದು. ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಹಿಳೆಯರು BMTC ಬಸ್ನತ್ತ ಮುಖ ಮಾಡಿದ್ದಾರೆ. ಆಸ್ಪತ್ರೆ, ಆಫೀಸ್, ಶಾಪಿಂಗ್, ಹೀಗೆ ವಿವಿಧ ಕೆಲಸಗಳಿಗೆ ನಗರದಲ್ಲಿ ಬಿಎಂಟಿಸಿಯನ್ನೇ ಹೆಚ್ಚು ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ ಫ್ರೀ ಬಸ್ ಪ್ರಯಾಣದ ಎಫೆಕ್ಟ್ ಓಲಾ, ಊಬರ್ಗೂ ತಟ್ಟಿದೆ. ಬುಕ್ಕಿಂಗ್ ಸಂಖ್ಯೆಯಲ್ಲಿ ಕೊಂಚ ಇಳಿಕೆ, ಎರಡೇ ದಿನಕ್ಕೆ ಕಂಗಲಾದ ಓಲಾ-ಊಬರ್, ಟ್ಯಾಕ್ಸಿ ಚಾಲಕರು.
ಶಕ್ತಿ ಯೋಜನೆ ಜಾರಿಯಾದ ಎರಡು ದಿನಗಳಿಂದ, ಓಲಾ-ಊಬರ್ ಚಾಲಕರಿಗೆ ಬುಕ್ಕಿಂಗ್ನಲ್ಲಿ ವಿಳಂಬವಾಗ್ತಿದೆ. ಗಂಟೆಗೆ ಒಂದೋ ಎರಡೋ ಬುಕ್ಕಿಂಗ್ ಬರುತ್ತಿದೆ. ಹೀಗಾಗಿ ಓಲಾ- ಊಬರ್, ಟ್ಯಾಕ್ಸಿ ಚಾಲಕರು ಆತಂಕದಲ್ಲಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಹೊಟ್ಟೆ ಮೇಲೂ ಸರ್ಕಾರ ಹೊಡೆದಂತಾಗುತ್ತೆ. ಕನಿಷ್ಟ ಪಕ್ಷ ಸರ್ಕಾರ ನಮ್ಮ ವಾಹನಗಳ ಮೇಲಿರುವ ಪರ್ಮಿಟ್ ಟ್ಯಾಕ್ಸ್ ಆದ್ರೂ ಕಡಿಮೆ ಮಾಡಲಿ ಅಂತಾ ಕೇವಲ ಟ್ಯಾಕ್ಸಿಗಳಿಗೆ ಮಾತ್ರವಲ್ಲ, ಆಟೋಗಳಿಗೂ ಬಾಡಿಗೆ ಸಿಗ್ತಿಲ್ಲ. ಬಡವರ್ಗ, ಮಧ್ಯಮ ವರ್ಗದವ್ರೆಲ್ಲಾ, ಬಿಎಂಟಿಸಿಯತ್ತ ಮುಖ ಮಾಡಿದ್ರೆ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡೋರು, ಉನ್ನತ ಹುದ್ದೆಯಲ್ಲಿರುವವರು, ಹಣ ಇದ್ದವ್ರು ಮಾತ್ರ ಓಲಾ-ಊಬರ್ನಲ್ಲಿ ಪ್ರಯಾಣ ಮಾಡ್ತಿದ್ದಾರೆ ಅನ್ನೋದು ಆಟೋ ಹಾಗೂ ಟ್ಯಾಕ್ಸಿ ಚಾಲಕರ ಮಾತು.