ಶಿವಮೊಗ್ಗ : ಶಿವಮೊಗ್ಗದ ರಾಗಿಗುಡ್ಡ ಗಲಾಟೆ ಪ್ರಕರಣ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಯಾರು ಆತಂಕ ಪಡುವ ಅಗತ್ಯಇಲ್ಲಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಶಿವಮೊಗ್ಗದ ರಾಗಿಗುಡ್ಡ ಗಲಾಟೆ ಪ್ರಕರಣ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಯಾರು ಆತಂಕ ಪಡುವ ಅಗತ್ಯಇಲ್ಲ. ಘಟನೆಗೆ ಕಾರಣ ಯಾರು ಅನ್ನೋದು ತನಿಖೆ ಮಾಡ್ತಿದ್ದಾರೆ ಲಾ ಅಂಡ್ ಆರ್ಡರ್ ವಿಭಾಗದ ಎಡಿಜಿಪಿಯನ್ನೇ ನಾವು ಅಲ್ಲಿಗೆ ಕಳಿಸಿದ್ದೆವು. ಎರಡೂ ಕಡೆಯಿಂದಲೂ ಕಲ್ಲು ಹೊಡೆದಿದ್ದಾರೆ . ಕೆಲವರ ಬಂಧನ ಆಗಿದೆ, ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದಿದ್ದಾರೆ.
ಶಿವಮೊಗ್ಗದ ರಾಗಿಗುಡ್ಡ ಗಲಾಟೆ ಪ್ರಕರಣ
ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣ ಸಂಬಂಧ ರಾಗಿಗುಡ್ಡ ಶಾಂತಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನು ಹೊರತುಪಡಿಸಿ ಶಿವಮೊಗ್ಗ ನಗರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, 144 ಸೆಕ್ಷನ್ ಮುಂದುವರಿದಿದೆ.