Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಕೋಲಾರ ಜನರ ಸಂಕಷ್ಟಕ್ಕೆ ಸಿದ್ದರಾಮಯ್ಯ ಇದುವರೆಗೂ ಸ್ಪಂದಿಸಿಲ್ಲ – ಸಿಟಿ ರವಿ

ಟಿಪ್ಪು ಸುಲ್ತಾನ್ ಸಿದ್ದಾಂತ ಹಾಗು ಸಾವರ್ಕರ್ ಸಿದ್ದಾಂತಗಳ ಮಧ್ಯೆ ಚುನಾವಣೆ ನಡೆಯುವ ಕಟೀಲ್ ಹೇಳಿಕೆಗೆ ಕೋಲಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಟಿಪ್ಪು ಸುಲ್ತಾನ್ (Tippu sultan) ಸಿದ್ದಾಂತ ಹಾಗು ಸಾವರ್ಕರ್ ಸಿದ್ದಾಂತಗಳ ಮಧ್ಯೆ ಚುನಾವಣೆ ನಡೆಯುವ ಕಟೀಲ್ ಹೇಳಿಕೆಗೆ ಕೋಲಾರ (Kolar) ದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT.Ravi)  ಪ್ರತಿಕ್ರಿಯೆ ನೀಡಿದ್ದಾರೆ. ಟಿಪ್ಪು ಸುಲ್ತಾನ್ ಗೂ ಒಂದು ಸಿದ್ದಾಂತ ಇದೆ . ಟಿಪ್ಪು ಸುಲ್ತಾನ್ ರಾಜ ಅಲ್ಲ. ಒಡೆಯರ್ ಸಂಸ್ಥಾನದಲ್ಲಿನ ಸಾಮಾನ್ಯ ಸೈನಿಕನಿಂದ ವಿವಿಧ ಹುದ್ದೆ ಅಲಂಕರಿಸಿದ್ದ. ಮೋಸದಿಂದ ಒಡೆಯರ್ ಸಂಸ್ಥಾನವನ್ನ ಟಿಪ್ಪು ಸುಲ್ತಾನ್ ಕಬಳಿಸಿದ್ದ.

Row over Tipu Sultan resurfaces in Andhra town

ನಮ್ಮದು ಕನ್ನಡ ಆಡಳಿತ ಭಾಷೆ, ಪರ್ಷಿಯನ್ ಭಾಷೆಗೂ ನಮಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ರು. ಭಾಷೆಯನ್ನು ಬದಲಾಯಿಸೋ ಅಂತದ್ದು ಟಿಪ್ಪು ಸಿದ್ದಾಂತ. ಸತ್ಯದ ಪರ ಧ್ವನಿ ಎತ್ತಿದವರನ್ನ ನರಮೇಧ ಮಾಡಿದ್ದು ಟಿಪ್ಪು ಸುಲ್ತಾನD . ಟಿಪ್ಪು ಸಿದ್ದಾಂತವನ್ನ ಒಪ್ಪಿರೋದು ಕಾಂಗ್ರೆಸ್, ಅವರನ್ನ ಪ್ರತಿಪಾದಿಸೋರು ಕಾಂಗ್ರೆಸ್. ರಾಜ್ಯದ ಹಲವೆಡೆ ನರಮೇಧ ಮಾಡಿದ್ದು ಟಿಪ್ಪು ಸುಲ್ತಾನ್. ವಾಸ್ತವಿಕವಾಗಿ ಈ ನೀತಿಗೆ ನಾವು ವಿರುದ್ದ. ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ದ ಹೋರಾಟ ಮಾಡಿದ್ದು ನಿಜ, ಆದರೆ ರಾಜ್ಯಕ್ಕೆ ಟಿಪ್ಪು ಕೊಡುಗೆ ಏನಿಲ್ಲ. ಈ ಬಾರಿ ಟಿಪ್ಪು ಸುಲ್ತಾನ್ ಹಾಗು ನಾಲ್ವಡಿ ಕೃಷ್ಣರಾಜ ಒಡೆಯರ್ (Nalvadi krishnaraja odeyar) ಸಿದ್ದಾಂತಗಳ ಮದ್ಯೆ ಚುನಾವಣೆ ನಡೆಯಲಿದೆ. ಒಡೆಯರ್ ಸಿದ್ದಾಂತಗಳು, ಸಾವರ್ಕರ್ ಸಿದ್ದಾಂತಗಳು ಎರಡೂ ಒಂದೇ. ನಾವು ಅಭಿವೃದ್ಧಿ ಪರವಾದ ಅಭ್ಯುದಯ ಹೊಂದಿದ್ದ ಒಡೆಯರ್ ಪರವಾದವರು ಎಂದು ಹೇಳಿದ್ರು.
ಇದೇ ವೇಳೆ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿ.ಟಿ ರವಿ ಜಾತ್ಯಾತೀತ ಅನ್ನೋದನ್ನ ತೆಗದು ಕೆಲವರು ಜಾತೀವಾದಿಗಳಾಗಿದ್ದಾರೆ. ಏನೇ ತಿಪ್ಪರಲಾಗ ಹಾಕಿದ್ರು ಲಾಟರಿ ಹೊಡೆಯುತ್ತೆ ಅನ್ನೋಕೆ ಆಗಲ್ಲ. 2006, 2018 ರಲ್ಲಿ ಲಾಟರಿ ಹೊಡೀತು. ಪ್ರತೀ ಚುನಾವಣೆಯಲ್ಲಿ ಲಾಟರಿ ಹೊಡೆಯುತ್ತೆ ಅಂದ್ರೆ ಆಗಲ್ಲ. ಈ ಬಾರಿ ಕ್ಲಿಯರ್ ಮೆಜಾರಿಟಿ ಬರುತ್ತೆ ಅಂತ ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯವಿದೆ. ನಮ್ಮಲ್ಲಿ ಯಾವುದೇ ಜಾತಿಯಾಧಾರಿತ ಸಿಎಂ ಆಯ್ಕೆಯಲ್ಲ. ನಮ್ಮ ಪಕ್ಷದ ಮೇಲೆ ಅಪಪ್ರಚಾರ ಇದೇ ಮೊದಲೇನಲ್ಲ. ನರೇಂದ್ರ ಮೋದಿಯವರು ಜಾತಿ ಹೆಸರೇಳಿಕೊಂಡು, ಸಿಎಂ, ಪಿಎಂ ಆಗಿಲ್ಲ . ಸೋ ಕಾಲ್ಡ್ ನಾಯಕರಿಗೆ ಯಾಕ್ ಜಾತಿ ನೆನಪಾಗಬೇಕು ಎಂದು ಬ್ರಾಹ್ಮಣರ ಕುರಿತು HD ಕುಮಾರಸ್ವಾಮಿ ಹೇಳಿಕೆಗೆ ಕಿಡಿ ಕಾರಿದ್ದಾರೆ. ಇದನ್ನೂ ಓದಿ : – ಫೆಬ್ರವರಿ 14 ವ್ಯಾಲೆಂಟೆನ್ಸ್ ಡೇ ಅಲ್ಲ, ಇನ್ಮುಂದೆ ಕೌ ಹಗ್ ಡೇ

ಡಿಕೆಶಿ ಪುತ್ರಿಗೆ ED ನೋಟೀಸ್ ಜಾರಿ ವಿಚಾರ
ಟಾರ್ಗೆಟ್ ಮಾಡಿದ್ದಾರೆಂದು ಭಾವಿಸಬಾರದು. ಹಣದ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನೋಟಿಸ್ ನೀಡ್ತಾರೆ . ಆಲೂಗಡ್ಡೆಯಿಂದ ಚಿನ್ನ ಬೆಳೆಯೋ ಮಾತನ್ನ ಅವರ ನಾಯಕರು ಹೇಳಿದ್ದರು. ರಾಹುಲ್ ಗಾಂಧಿ (Rahul gandhi) ಈ ವಿದ್ಯೆಯನ್ನ ಡಿಕೆಶಿಗೆ ಮಾತ್ರ ಹೇಳಿಕೊಟ್ಟಿದ್ದಾರೆ. ಅದನ್ನ ಜನ್ರಿಗೂ ಹೇಳಿಕೊಟ್ರೆ ಬಡ ಜನತೆನೂ ಶ್ರೀಮಂತರಾಗುತ್ತರಲ್ವಾ ಎಂದು ಪ್ರಶ್ನಿಸಿದ್ರು . ED ಯವರು ಆಲೂಗಡ್ಡೆ ಚಿನ್ನ ತೆಗೆದಿರೋ ಲೆಕ್ಕ ಕೇಳ್ತಿದ್ದಾರೆ ಅಷ್ಟೆ ಎಂದು ಹೇಳಿದ್ರು.

ಕೋಲಾರ ಜನರ ಸಂಕಷ್ಟಕ್ಕೆ ಇದುವರೆಗೂ ಸಿದ್ದರಾಮಯ್ಯ (Siddaramaiah )  ಸ್ಪಂದಿಸಿಲ್ಲ. ಕೇವಲ ಮತಕ್ಕಾಗಿಯೇ ಸಿದ್ದರಾಮಯ್ಯ ಕೋಲಾರಕ್ಕೆ ಬಂದಿದ್ದಾರೆ. ಶ್ರೀರಾಮುಲು ಬಾದಾಮಿಯಲ್ಲಿ ಇನ್ನು ಹೆಚ್ಚು ಪ್ರಚಾರ ಮಾಡಿದ್ದರು ಸಿದ್ದು ಗೆಲ್ತಿರಲಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲ್ತಿರಲಿಲ್ಲ ಎಂದು ಸಿ.ಟಿ ರವಿ ತಿಳಿಸಿದ್ದಾರೆ.

ಇದನ್ನೂ ಓದಿ : –  ಮೈಲಾರದಲ್ಲಿ ಮೈ ಜುಮ್ಮೆನಿಸಿದ ಕಂಚಾವೀರರ ಶಸ್ತ್ರ ಪವಾಡ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!