13 ಜನರನ್ನ ಮಂಚದ ಮೇಲೆ ಮಲಗಿಸಿ ಸರ್ಕಾರ ತಂದ್ರಲ್ಲ, ನಿಮಗೆ ನಾಚಿಕೆ ಆಗಬೇಕು ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM.ibrahim ) ಹೇಳಿದ್ದಾರೆ. ಹುಬ್ಬಳ್ಳಿ (Hubballi) ಯಲ್ಲಿ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ (Ramesh jarakiholi) ಸಿ.ಡಿ ತಗೊಂಡು ಗೃಹಸಚಿವರ ಹತ್ರ ಹೋಗಿದ್ದಾರೆ, ವಿಷಕನ್ಯೆ ಬಗ್ಗೆ ಮಾತಾಡ್ತಾರೆ. ಕಟೀಲು ಪಿಟೀಲು ಬಾರಿಸಿ ಲವ್ ಜಿಹಾದ್ ಬಗ್ಗೆ ಮಾತಾಡ್ತಾನೆ.
ಬೊಮ್ಮಾಯಿ ಇಂತಹ ಪಾಪಿಗಳನ್ನು ಕಟ್ಟಿಕೊಂಡು ಸಿಎಂ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸದಾನಂದಗೌಡ (Sadananda gowda) ಸೇರಿ 12 ಜನರ ಸಿ.ಡಿ ಹೊರಗೆ ತರಬೇಕು. ಇಲ್ಲದಿದ್ದರೇ ಬಿಜೆಪಿ ನಾಯಕರು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಹೊರಗೆ ಬರಬೇಕು. ಸ್ಯಾಂಟ್ರೋ ರವಿ ಈಗ ಎಲ್ಲಿದ್ದಾನೆ? ಅವನ ಬಗ್ಗೆ ಸುದ್ದಿನೇ ಇಲ್ಲ. ಮಂಚ ಮುರಿಯೋದೆ ಅಚ್ಚೇ ದೀನ್ ನಾ? ಇದಕ್ಕೆ ಮೋದಿ ಉತ್ತರ ಕೊಡಬೇಕು ಎಂದು ಹೇಳಿದರು. ಇದನ್ನುಓದಿ :- ಆರ್ಕಿಡ್ ಶಾಲೆ ಅವಾಂತರ – 500 ಶಾಲೆಗಳಿಗೆ ನೋಟಿಸ್
ಇದೇ ವೇಳೆ ಈ ಬಾರಿ ವರುಣಾದಲ್ಲಿ ಬಿ.ಎಸ್ ಯಡಿಯೂರಪ್ಪ (Yediyurappa) ಇಲ್ಲದೇ ಸಿದ್ದರಾಮಯ್ಯ (Siddaramaiah ) ಗೆಲ್ಲೋಕೆ ಆಗಲ್ಲ. ಆದ್ದರಿಂದ ಅವರು ಸಿದ್ದರಾಮಯ್ಯ ಕೋಲಾದರಲ್ಲಿ ನಿಲ್ಲಲ್ಲ ಎಂದಿದ್ದಾರೆ. ನಾನು ಸಹ ಕೋಲಾರ ಬೇಡ ಎಂದಿದ್ದೇನೆ. ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರೂ ಒಂದೇ ಎಂದು ಸಿ.ಎಂ ಇಬ್ರಾಹಿಂ ತಿಳಿಸಿದ್ದಾರೆ.
ಇದನ್ನುಓದಿ :- ಮಹಿಳೆಯರ ಪರವಾದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ – ಲಕ್ಷ್ಮೀ ಹೆಬ್ಬಾಳ್ಕರ್