ರಾಯಚೂರು : ಸಿಂಧನೂರಿನಲ್ಲಿ ತಾಯಿ & ಮಗನ ಮೇಲೆ ನಾಯಿ ದಾಳಿ ಪ್ರಕರಣ ಬೆನ್ನಲ್ಲೆ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದಕ್ಕೆ ಮಕ್ಕಳು, ಹಿರಿಯನಾಗರಿಕರು ಮನೆಯಿಂದ ಹೊರಬರಲು ಹೆದರುವಂತಾಗಿದೆ.
ಈ ನಿಟ್ಟಿನಲ್ಲಿ ಇಂದು ರಾಯಚೂರು ನಗರ ಸಭೆ ವ್ಯಾಪ್ತಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಕುವುದಕ್ಕೆ ಮುಂದಾಗಿದ್ದಾರೆ. ಈ ಭಯಾನಕ ಘಟನೆ ಬೆನ್ನಲ್ಲೆ ಬೀದಿನಾಯಿಗಳ ಬಗ್ಗೆ ಕಾರ್ಯಾಚರಣೆ ನಡೆಸಿ, ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದುಗಳನ್ನು ಅಧಿಕಾರಿಗಳು ನೀಡುವುದಕ್ಕೆ ಮುಂದಾಗುವ ಮೂಲಕ ಬೀದಿನಾಯಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕೋದಕ್ಕೆ ಮುಂದಾಗಿದಂತೂ ನಿಜ.
ಪ್ರಕರಣ ಹಿನ್ನೆಲೆ : ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಜನವರಿ 4ರಂದು ಸಂಜೆ ಆದರ್ಶ ಕಾಲೋನಿಯಲ್ಲಿರುವ ಆಸ್ಪತ್ರೆಗೆ ತೆರಳಿದ್ದ ತಾಯಿ ಮಗನ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿದೆ. ಮಗನೊಂದಿಗೆ ತಾಯಿ ಗಂಗಮ್ಮ ತೆರಳುವುದಕ್ಕೆ ಹೊರ ಬರುತ್ತಿದ್ದಂತೆ ಮಗನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ.
ಕೆಳಗೆ ಬಿದ್ದು ಒದ್ದಾಡಿದರೂ ಕಾಲು ತೊಡೆ ಭಾಗಕ್ಕೆ ಬಲವಾಗಿ ಕಚ್ಚಿರುವ ಬೀದಿನಾಯಿ. ನಾಯಿ ದಾಳಿಯಿಂದ ಮಗನ ರಕ್ಷಿಸಲು ಬಂದ ತಾಯಿಗೂ ಕಚ್ಚಿದೆ. ಕೊನೆಗೆ ಹರಸಾಹಸ ಪಟ್ಟು ಸ್ಥಳೀಯರು ನಾಯಿ ಓಡಿಸಿದ್ದಾರೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಗಾಯಾಳುಗಳು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೀದಿನಾಯಿ ಕಂಡರೇನೆ ಭಯಪಡುವಂತಾಗಿದೆ.