ಬಿಬಿಸಿ ಇಂಡಿಯಾ (BBC india) ದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (IT raid) ದಾಳಿ ಅತ್ಯಂತ ದುರದೃಷ್ಟಕರ ಎಂದು ಪಶ್ಚಿಮ ಬಂಗಾಳ (West bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamatha banerjee) ಹೇಳಿದ್ದಾರೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಸೇಡು ಎಂದು ಆರೋಪಿಸಿದ್ದಾರೆ.
“ಇದು ಅತ್ಯಂತ ದುರದೃಷ್ಟಕರ; ಇದು ಬಿಜೆಪಿ (BJP) ಸರ್ಕಾರದ ರಾಜಕೀಯ ಸೇಡಿನ ಕ್ರಮವಾಗಿದೆ” ಎಂದು ಪಶ್ಚಿಮ ಬಂಗಾಳ ಅಸೆಂಬ್ಲಿಯಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂತಹ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತವೆ, ಕೇಸರಿ ಪಕ್ಷವು ಮಾಧ್ಯಮವನ್ನು ನಿಯಂತ್ರಿಸುತ್ತಿದೆ. ಒಂದು ದಿನ ದೇಶದಲ್ಲಿ ಮಾಧ್ಯಮವೇ ಇಲ್ಲದಂತೆ ಮಾಡುತ್ತಾರೆ. ಬಿಜೆಪಿಯವರು ಜನಾದೇಶದ ಬಗ್ಗೆ ಕಾಳಜಿ ವಹಿಸುವುದಿಲ್ಲ, ಇವರ ಸರ್ವಾಧಿಕಾರ ಹಿಟ್ಲರ್ (Hitler) ಗಿಂತ ಹೆಚ್ಚು” ಎಂದು ಪಶ್ಚಿಮ ಬಂಗಾಳ ಸಿಎಂ ವಾಗ್ದಾಳಿ ನಡೆಸಿದರು. ಭಾರತದಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟರ್ ವಿರುದ್ಧ ಆಪಾದಿತ ತೆರಿಗೆ ವಂಚನೆಯ ತನಿಖೆಯ ಭಾಗವಾಗಿ ತೆರಿಗೆ ಇಲಾಖೆಯು ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಕಾರ್ಯಾಚರಣೆ ನಡೆಸಿತ್ತು.
ಇದನ್ನೂ ಓದಿ : – ಬಿಜೆಪಿ ಸರ್ಕಾರದಲ್ಲಿ ಬಡವರು ಜೀವನ ಮಾಡೋದೆ ಕಷ್ಟವಾಗಿದೆ – ಸುರ್ಜೇವಾಲ