Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಬರ ಪರಿಹಾರ ಬಿಡುಗಡೆಗೆ ಆಗ್ರಹಿಸಿ, ಡಿಸೆಂಬರ್‌ 7ಕ್ಕೆ ಸುವರ್ಣ ಸೌಧಕ್ಕೆ ಮುತ್ತಿಗೆ

ಧಾರವಾಡ  : ಧಾರವಾಡ ಜಿಲ್ಲೆಗೆಬರ ಪರಿಹಾರ ಬಿಡುಗಡೆ ಮಾಡಲು ಆಗ್ರಹಿಸಿ ಬಾರುಕೋಲು ಚಳುವಳಿ ಮುಖಾಂತರ ರತ್ನಭಾರತ ರೈತ ಸಮಾಜದ ವತಿಯಿಂದ ಡಿ. 7ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರತ್ನ ರೈತ ಭಾರತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಕಳಸಾ ಬಂಡೂರಿ ಮಹದಾಯಿ ಯೋಜನೆ ಹೋರಾಟಗಾರರು ಆದ ಹೇಮನಗೌಡ ಬಸನಗೌಡ್ರ ಆಗ್ರಹಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದು, ಧಾರವಾಡ ಜಿಲ್ಲೆಗೆ ₹212 ಕೋಟಿ ಬರ ಪರಿಹಾರದ ಹಣ ಬರಬೇಕಿತ್ತು. ಆದರೆ ಇದುವರೆಗೆ ಯಾವುದೇ ಹಣ ಜಮಾ ಆಗಿಲ್ಲ. ರಾಜ್ಯದಾದ್ಯಂತ ಬರಗಾಲಕ್ಕೆ ತುತ್ತಾಗಿ ರೈತರು ಬೆಳೆ ಸಾಲ ಮಾಡಿ ತುಂಬಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರು ತುಂಬಿದ ಬೆಳೆ ವಿಮೆ ಹಣವನ್ನು ಮಿಮಾ ಕಂಪನಿಯಿಂದ ಕೊಡಿಸಬೇಕು, ಕೇಂದ್ರ ಸರ್ಕಾರದಿಂದ ರೈತರಿಗೆ ₹6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ ಬರುವ ₹4 ಸಾವಿರವನ್ನು ರಾಜ್ಯ ಸರ್ಕಾರ ತಡೆ ಹಿಡಿದಿದ್ದು, ಕೂಡಲೇ ಪುನರಾರಂಭಿಸುವಂತೆ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕು.

ಮೇಕೆದಾಟು ಯೋಜನೆ ಮೇಲೆ ತೋರುವ ಕಾಳಜಿ ಕಳಸಾ ಬಂಡೂರಿ ಯೋಜನೆಗೆ ಏಕಿಲ್ಲ? ರಾಜ್ಯ ಸರ್ಕಾರ ಏಕೆ ಮಲತಾಯಿ ಧೋರಣೆ ತೋರುತ್ತಿದೆ? ಕಳಸಾ ಬಂಡೂರಿ ಮಹಾದಾಯಿ ಯೋಜನೆಯ ಕಾಮಗಾರಿಯನ್ನೂ ಪ್ರಾರಂಭಿಸಿಬೇಕು ಹಾಗೂ ರಾಜ್ಯದ ರೈತರಿಗೆ 3 ಫೇಸ್ 12 ತಾಸು ವಿದ್ಯುತ್‌ ಕೊಡಬೇಕು ಎಂಬುದು ನಮ್ಮ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!