ಬೆಳಗಾವಿ : ಪೃಥ್ವಿಸಿಂಗ್ ಮೇಲೆ ದಾಳಿ ಮಾಡಿದವರನ್ನ ಕೂಡಲೇ ಬಂಧಿಸಬೇಕು ಎಂದು ಪರಿಷತ್ ಸದಸ್ಯ ಛೆಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ
ಸುವರ್ಣಸೌಧಲ್ಲಿ ಮಾತನಾಡಿದ ಅವರು ಸದನ ಮುಗಿದ ತಕ್ಷಣ ನಾನು, ಕೇಶವ್ ಪ್ರಸಾದ್ ರೂಮಿಗೆ ಹೊರಟಿದ್ದೆವು. ಪೃಥ್ವಿ ಸಿಂಗ್ ಮಗ ಕರೆ ಮಾಡಿದ್ದ. ಏನಾಯ್ತು ಅಂತ ಕೇಳಿದೆ. ಚನ್ನರಾಜ್ ಕಡೆಯವರು ತಂದೆ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೆ ಹೋಗ್ತಿದ್ದೇವೆ ಅಂತ ಹೇಳಿದ. ಕೆಎಲ್ ಇ ಆಸ್ಪತ್ರೆಗೆ ಸೇರಿಸಿರೋದಾಗಿ ಹೇಳಿದೆವು. ಈಗಲೂ ಐಸಿಯುನಲ್ಲಿ ಪೃಥ್ವಿ ಸಿಂಗ್ ಇದ್ದಾರೆ.
ಕೂಡಲೇ ಅವರನ್ನ ಬಂಧಿಸುವಂತೆ ಆಗ್ರಹ ಮಾಡಿದ್ದೇವೆ. ಆದ್ರೆ ಯಾರನ್ನೂ ಬಂಧಿಸಿಲ್ಲ. ಸರ್ಕಾರ ತನ್ನ ಜವಾಬ್ದಾರಿ ಮೆರೆಯಬೇಕು. ಪೊಸ್ಟರ್ ಹಾಕಿದ್ರೆ ಬಂಧನ ಮಾಡ್ತಾರೆ. ಮಾಡಿದವರು ಅವರಿಗೆ ಬೇಕಾದ ಕಾರಣ ಕೊಡ್ತಾರೆ. ಚನ್ನರಾಜ್ ಈಗಾಗಲೇ ಹೇಳಿದ್ದಾರೆ.
ಅವರ ಮನೆಯನ್ನ ನಾವು ಮೊದಲು ಕಚೇರಿ ಮಾಡಿಕೊಂಡಿದ್ದೆವು ಅಂತ. ಅಲ್ಲಿ ಕೆಲ ಪೇಪರ್ ಕೇಳಲು ಹೋಗಿದ್ದೆವು ಅಂತ. ಐದು ವರ್ಷದ ಹಿಂದಿನ ಪೇಪರ್ ಈಗ ಇರಲಿದೆಯಾ.?ವಕೂಡಲೇ ತನಿಖೆ ನಡೆಸಬೇಕು. ಡಿಸಿಪಿ ಕರೆದು ನಾವೇ ಹೇಳಿದೆವು. ಪೊಲೀಸರು ನೋಡಿದ್ದಾರೆ ಸುಮೋಟೋ ಕೇಸ್ ಹಾಕಿಕೊಳ್ಳಬೇಕು. ಕೂಡಲೇ ಕ್ರಮ ಆಗಬೇಕು. ಇಲ್ಲದಿದ್ರೆ ಸದನದ ಒಳಗೂ, ಹೊರಗೂ ಹೋರಾಟ ಮಾಡ್ತೀವಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ವರದಿ : ಬಸವರಾಜ ಹೂಗಾರ