ಬೆಂಗಳೂರು : 4 ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಇಂದು ಹೊರ ಬೀಳಲಿದೆ ಈ ನಡುವೆ ತೆಲಂಗಾಣ ಕಾಂಗ್ರೆಸ್ ನವರಿಗೆ ಧಮ್ ಇಲ್ಲ ಎಂದು ವಿರೋಧ ಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿರುವ ವಿರೋಧ ಪಕ್ಷ ನಾಯಕ ಅಶೋಕ್ , ತೆಲಂಗಾಣ ಕಾಂಗ್ರೆಸ್ ನವರಿಗೆ ಧಮ್ ಇಲ್ಲ, ಬರಗಾಲ ಬಂದಾಗ ಸಿದ್ದರಾಮಯ್ಯ ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ಇವಾಗ ಅವರದ್ದು ಬರೀ ಮೊಸಳೆ ಕಣ್ಣೀರು ಆಗಿದೆ.
ಅಧಿವೇಶನ ಇದೆ, ಆದ್ರೆ ಇವರು ಹೋಗಿ ಅಲ್ಲಿ ತೆಲಂಗಾಣದ ಸೇವೆ ಮಾಡ್ತಿದ್ದಾರೆ. ಮುಂದೆ ಇವರಿಗೆ ಜನರು ತಕ್ಕ ಪಾಠ ಕಲಿಸ್ತಾರೆ. ಅಧಿವೇಶನದಲ್ಲಿ ಬರದ ಬಗ್ಗೆ ಮಾತಾಡೋದು ಬಿಟ್ಟು, ಇಲ್ಲಿ ರೆಸಾರ್ಟ್ನಲ್ಲಿ ಶಾಸಕರ ಸೇವೆ ಮಂತ್ರಿಗಳು ಮಾಡಿದ್ರೆ, ಅದರ ಪರಿಣಾಮ ನೆಟ್ಟಗಿರಲ್ಲ. ಅವರಿಗೆ ಹೋರಾಟ ಪ್ರತಿಭಟನೆ ಗಳ ಮೂಲಕ ತಕ್ಕ ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.