Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Sports News

ಟೀಂ ಇಂಡಿಯಾ 2011ರ ಏಕದಿನ ವಿಶ್ವಕಪ್ ಗೆಲ್ಲೋದಕ್ಕೆ ಕಾರಣ ಆ ಡೀಶ್

2023ರ ಏಕದಿನ ವಿಶ್ವಕಪ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಏಕದಿನ ಕ್ರಿಕೆಟ್ ನ ಮಹಾಸಮರ ಶುರುವಾಗಲಿದೆ. ಬರೋಬ್ಬರಿ 12 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವಕಪ್ ನಡೆಯಲಿದ್ದು, ಈಗಿನಿಂದಲೇ ಸಿದ್ದತೆ ಆರಂಭವಾಗಿದೆ.
ಇದರ ನಡುವೆ 2011ರ ಏಕದಿನ ವಿಶ್ವಕಪ್ ಬಗ್ಗೆಯೂ ಈಗ ಸಾಕಷ್ಟು ಚರ್ಚೆ ಆಗುತ್ತಿದೆ. ಅದ್ರಲ್ಲೂ ಆಗ ಧೋನಿ ಮಾಡಿದ ಮ್ಯಾಜಿಕ್ ಅನ್ನೇ ರೋಹಿತ್ ಮಾಡ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ODI World Cup


ಇದರ ನಡುವೆ ಅಂದಿನ ಅಂದ್ರೆ 2011ರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಆಟಗಾರರು ಇದೀಗ ಗೆಲುವಿನ ರಹಸ್ಯ ಬಯಲು ಮಾಡುತ್ತಿದ್ದಾರೆ. ಅದರಲ್ಲೂ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಒಂದು ಇಂಟ್ರಸ್ಟಿಂಗ್ ಮ್ಯಾಟರ್ ಅನ್ನ ರಿಲೀವ್ ಮಾಡಿದ್ದಾರೆ. ಅದು ಏನಂದ್ರೆ ನಾವು ವಿಶ್ವಕಪ್ ಗೆಲ್ಲೋದಕ್ಕೆ ಧೋನಿಯ ಮೂಢನಂಬಿಕೆ ಅನ್ನೋದು..

ಹೌದು..! ಧೋನಿ ಒಬ್ಬ ಸೂಪರ್ ಸ್ಟಿಶಿಯಸ್. ಮೂಢನಂಬಿಕೆಯನ್ನು ಸಿಕ್ಕಾಪಟ್ಟೆ ನಂಬುತ್ತಾರೆ. 2011ರ ಏಕದಿನ ವಿಶ್ವಕಪ್ ಪೂರ್ತಿ ಧೋನಿ, ಬರೀ ಕಿಚಡಿಯನ್ನ ಸೇವಿಸಿದ್ರು. ಯಾಕಂದ್ರೆ ಕಿಚಡಿ ತಿಂದ್ರೆ ವಿಶ್ವಕಪ್ ಗೆಲ್ತೀವಿ ಅಂತಾ ಧೋನಿ ನಂಬಿದ್ದರು. ಅಲ್ಲದೆ ನಾನು ರನ್ ಹೊಡೆಯದಿದ್ದರೂ ಪರವಾಗಿಲ್ಲ. ಆದರೆ ಮೂಢನಂಬಿಕೆ ವರ್ಕ್ ಆಗುತ್ತೆ ಅಂತಿದ್ದರು. ಕೊನೆಗೆ ಧೋನಿಯ ಮೂಢನಂಬಿಕೆಯೇ ನಿಜವಾಗಿತು. ನಾವು ಫೈನಲ್ ಪಂದ್ಯ ಗೆದ್ವಿ ಅಂತಾ ಸೆಹ್ವಾಗ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!