ಮಂಡ್ಯ : ನಾನು ಬಿಜೆಪಿ ಸಂಸದೆ ಅಲ್ಲ, ಸ್ವತಂತ್ರ ಅಭ್ಯರ್ಥಿಯಾಗಿ ಸಂಸದೆಯಾಗಿ ಆಯ್ಕೆಯಾದವಳು ಎಂಬುದನ್ನು ನೆನಪಿಟ್ಟುಕೊಳ್ಳಿ. ಬಿಜೆಪಿಗೆ ಬೆಂಬಲ ನೀಡಿರುವುದು ಎಂದು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರು ಕೈಗೊಂಡ ನಿರ್ಧಾರಗಳಿಗೂ ನನಗೂ ಸಂಬಂಧ ಇರುವುದಿಲ್ಲ. ಸ್ವತಂತ್ರವಾಗಿ ನನ್ನದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಲು ನನಗೂ ಸ್ವಾತಂತ್ರ್ಯವಿದೆ. ನನ್ನ ನಿಲುವು ಏನು ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ಪಕ್ಷದ ನಿಲುವಿನ ಬಗ್ಗೆ ಸಂಬಂಧಪಟ್ಟವರಲ್ಲಿ ಅಥವಾ ಪಕ್ಷದ ವಕ್ತಾರರ ಬಳಿ ಕೇಳಬಹುದು ಎಂದು ಸುಮಲತಾ ಹೇಳಿದ್ದಾರೆ.
ಎಲ್ಲವನ್ನೂ ನನ್ನ ಬಳಿ ಕೇಳಿಯೇ ಬಿಜೆಪಿಯವರು ಮಾಡಬೇಕು ಎಂಬುದೇನೂ ಇಲ್ಲ. ಮೈತ್ರಿ ನೆಲೆಯಲ್ಲಿ ಏನು ಮಾತನಾಡಬೇಕೋ ಅಷ್ಟೇ ಹೇಳಬಹುದಲ್ಲದೆ ಪ್ರತಿಯೊಂದು ವಿಷಯದಲ್ಲಿಯೂ ನಾನು ಮಧ್ಯಪ್ರವೇಶಿಸಲಾಗದು ಎಂದು ಸುಮಲತಾ ಹೇಳಿದ್ದಾರೆ.