ಬೆಂಗಳೂರು : ಸೋಮವಾರ ಆಯುಧ ಪೂಜೆ ಹಿನ್ನೆಲೆ ಕೆಎಸ್‌ಆರ್‌ಟಿಸಿ (KSRTC) ಹಾಗೂ ಬಿಎಂಟಿಸಿ (BMTC) ಸರ್ಕಾರಿ ಬಸ್‌ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ನೌಕರರಿಂದ ಡಿಮ್ಯಾಂಡ್ ಮಾಡುತ್ತಿದ್ದಾರೆ.
ಕಳೆದ ಬಾರಿ ಕೋವಿಡ್‌ನಿಂದಾಗಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಕಷ್ಟದಲ್ಲಿದ್ದು, ಆಯುಧಪೂಜೆಯನ್ನು ಅದ್ದೂರಿಯಾಗಿ ಆಚರಿಸೋದಕ್ಕೆ ಆಗಿಲ್ಲ ಈ ಕಾರಣದಿಂದಾಗಿ ಈಬಾರಿಯಾದರೂ ಅದ್ಧೂರಿಯಾಗಿ ಆಯುಧ ಪೂಜೆಯ ದಿನ ಹಬ್ಬ ಆಚರಣೆ ಮಾಡಬೇಕು ಕನಸು ಕಂಡ ನೌಕರರಿಗೆ ನಿರಾಸೆಯಾಗಿದೆ.
ಅದರಲ್ಲೂ ಆಯುಧ ಪೂಜೆ ಸಂದರ್ಭದಲ್ಲಿ ಹೂವು, ಬಾಳೆಕಂಬ, ಹಣ್ಣುಗಳ ಬೆಲೆ ಗಗನಕ್ಕೇರಿದೆ ಈ ನಡುವೆ ನೌಕರರಿಗೆ ಹೂವು, ಬಾಳೆಕಂಬ, ಹಣ್ಣು ತಂದು ಪೂಜೆ ಮಾಡಿ ಅಂತ ಸಾರಿಗೆ ನಿಗಮದಿಂದ ಪ್ರತಿ ಬಸ್‌ನ ಸಿಬ್ಬಂದಿಗೆ 100 ರೂಪಾಯಿ ಕೊಡಲಾಗಿದೆ. ಕೇವಲ 100 ರೂಪಾಯಿಯಲ್ಲಿ ಹಬ್ಬವನ್ನು ಹೇಗೆ ಮಾಡೋದಕ್ಕೆ ಆಗುತ್ತದೆ. ಒಂದು ಬಸ್‌ಗೆ ಸರಳವಾಗಿ ಪೂಜೆ ಮಾಡಲು ಬಾಳೆಕಂದು ತೆಂಗಿನಕಾಯಿ, ಕರ್ಪೂರ, ಕುಂಕುಮ, ಬೂದು ಕುಂಬಳಕಾಯಿ ವಿಭೂತಿ ಅಗತ್ಯವಿದೆ. ಅಷ್ಟೇ ಅಲ್ಲದೇ ದುಬಾರಿ ದುನಿಯಾ ಜೀವನ ನಡುವೆ 100 ರೂಪಾಯಿಗೆ ಒಂದು ಜೋಡಿ ಬಾಳೆಕಂಬ ಕೂಡಾ ಸಿಗಲ್ಲ,100 ರೂಪಾಯಿಯಲ್ಲಿ ಹೇಗೆ ತಾನೆ ಹಬ್ಬ ಮಾಡಲಾಗುತ್ತದೆ ಎಂದು ಸಾರಿಗೆ ನಿಗಮದ ನೌಕರರ ಬೇಸರಗೊಂಡಿದ್ದಾರೆ.
ಈ ಕಾರಣದಿಂದಾಗಿ ಪ್ರತಿ ಬಸ್‌ಗೆ ಹೆಚ್ಚುವರಿ 500 ರೂ. ಬಿಡುಗಡೆ ಮಾಡುವಂತೆ ಒತ್ತಾಯ ಮಾಡಲಾಗಿದೆ. ಹಿಂದೆಯೆಲ್ಲಾ ನಿಗಮದಲ್ಲಿ ಅದ್ಧೂರಿಯಾಗಿ ಆಯುಧ ಪೂಜೆ ಮಾಡೋದು ಸಂಪ್ರದಾಯವಾಗಿತ್ತು. ಆದ್ರೆ ಕೆಲ ವರ್ಷಗಳಿಂದ ಸರಿಯಾಗಿ ಹಬ್ಬ ಮಾಡೋಕೆ ಸಾಧ್ಯವಾಗ್ತಿಲ್ಲ. ಪ್ರತಿ ಬಾರಿ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಜಿಪುಣತನ ತೋರುತ್ತಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ನಡುವೆ ಆಯುಧ ಪೂಜೆ ಸಂಭ್ರಮಕ್ಕೆ ಹೆಚ್ಚುವರಿ ಹಣ ನೀಡುವಂತೆ ನೌಕರರು ಪಟ್ಟು ಹಿಡಿದಿರುವುದಂತೂ ನಿಜ.