ಮಂಡ್ಯ : ಮತ್ತೇ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ. ಕಾವೇರಿ ಪ್ರಾಧಿಕಾರದಿಂದ ನೀರು ಹರಿಸಲು ಆದೇಶ ಹಿನ್ನಲೆ, ರಾತ್ರೋ ರಾತ್ರಿ ತಮಿಳುನಾಡಿಗೆ KRS ಡ್ಯಾಂ ನಿಂದ ನೀರು ಬಿಡುಗಡೆ ಮಾಡಲಾಗಿದೆ.
ನೀರು ಬಿಡುಗಡೆ ಮಾಡಲ್ಲ ಎನ್ನುತ್ತಲೆ ಡ್ಯಾಂ ನಿಂದ ರಾಜ್ಯ ಸರ್ಕಾರ ನೀರು ಬಿಟ್ಟಿದೆ. ಸರ್ಕಾರದ ಸೂಚನೆ ಹಿನ್ನಲೆ KRS ಡ್ಯಾಂ ನ ಹೊರ ಹರಿವು 5 ಸಾವಿರ ಕ್ಯೂಸೆಕ್ ಗೆ ಹೆಚ್ಚಳವಾಗಿದೆ.
ಇನ್ನೂ ಪ್ರಾಧಿಕಾರದಿಂದ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ಹೊರಡಿಸಲಾಗಿದೆ.