ಸಂವಿಧಾನದ ಅಡಿಯಲ್ಲಿ ಅಂಬೇಡ್ಕರ್ರವರು ಮೀಸಲಾತಿ ಯಾವ ಕಾರಣಕ್ಕೆ ಬೇಕು ಅಂತ ಗೈಡ್ಲೈನ್ ಮಾಡಿದ್ದಾರೆ. ಅದರ ಅಡಿಯಲ್ಲಿ ಮೀಸಲಾತಿ ಆಗಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಮೀಸಲಾತಿ ವಿಚಾರವಾಗಿ ಜೆಡಿಎಸ್ ನಿಲುವಿನ ವಿಚಾರವಾಗಿ ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು ಮತ ಪಡೆಯೋದಕ್ಕೆ ಜಾತಿ ಜಾತಿಗಳ ನಡುವೆ ಸಂಘರ್ಷ ಮಾಡಿ ಸಮಾಜ ಒಡೆಯುವ ಕೆಲಸ ಮಾಡಬಾರದು. ಈ ರೀತಿಯ ವಾತವರಣ ನಿರ್ಮಾಣಕ್ಕೆ ಎರಡು ರಾಷ್ಟ್ರೀಯ ಪಕ್ಷ ಕಾರಣ ಮೀಸಲಾತಿ ವಿಚಾರದಲ್ಲಿ ಹುಡುಕಾಟ ಮಾಡ್ತಿದ್ದಾರೆ. ನಮ್ಮ ರಾಜ್ಯದಲ್ಲಿ 10 ಜಿಲ್ಲೆಯಲ್ಲಿ ಹಿಂದುಳಿದಿವೆ.
ನಿಮ್ಮ ಇಷ್ಟಬಂದ ಹಾಗೆ ತೀರ್ಮಾನ ಮಾಡಿದರೆ ಆಗುತ್ತಾ. ನಾಳೆ ಚುನಾವಣಾ ಹೋಗಬೇಕು ಎಂದು ಎಲ್ಲರನ್ನೂ ತೃಪ್ತಿಪಡಿಸಬೇಕೆಂಬ ಪ್ರಯತ್ನದಲ್ಲಿ ಸರ್ಕಾರವಿದೆ ಎಂದು ಹೇಳಿದರು. ಇನ್ನೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ವಿಚಾರವಾಗಿ ಸ್ಪಂದಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಯಾರು ಕರೆದುಕೊಂಡು ಹೋಗಿ ಕಲ್ಲು ಹೊಡಿದಿದ್ದಾರೆ ಅನ್ನೋದನ್ನು ನಾನು ಮಾತನಾಡೋಕೆ ಹೋಗಲ್ಲ. ಇಂತಹ ವಾತವರಣ ಸೃಷ್ಟಿ ಮಾಡಿರೋದು ಬಿಜೆಪಿ ಸರ್ಕಾರ. ಅವರೆ ಇದನ್ನ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.