ಯಡಿಯೂರಪ್ಪನವರನ್ನ ರಾಜಕೀಯವಾಗಿ ಮುಗಿಸಬೇಕು ಎಂದು ಅವರ ಮನೆ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಯಡಿಯೂರಪ್ಪನವರು ಸರ್ಕಾರದ ಪ್ರತಿನಿಧಿಯಲ್ಲ. ಮೀಸಲಾತಿ ವಿಚಾರದಲ್ಲಿ ಸಿಎಂ ಗೊಂದಲ ಸೃಷ್ಟಿಸಿದ್ದಾರೆ. ಈಗ ಯಡಿಯೂರಪ್ಪನವರನ್ನ ಸೆಂಟರ್ ಸ್ಟೇಜ್ ಗೆ ತರಬೇಕು. ಅಮಿತ್ ಷಾ ಮನೆಗೆ ಹೋಗಿಬೆನ್ನು ತಟ್ಟಿ ಬಂದಿದ್ದಾರೆ. ಮನೆ ಮೇಲೆ ಕಲ್ಲು ಹೊಡೆಯುತ್ತಾರೆ ಅಂದರೆ ಕಾರಣ ಏನು? ಇದು ಬಿಜೆಪಿಯ ಆಂತರಿಕ ಕುತಂತ್ರ. ಯಡಿಯೂರಪ್ಪನವರನ್ನ ರಾಜಕೀಯವಾಗಿ ಮುಗಿಸಬೇಕು, ಹಾಗಾಗಿಯೇ ಅವರ ಮನೆ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ.
ಮುಖ್ಯಮಂತ್ರಿಗಳ ಮೇಲೆ ಕಲ್ಲು ಹೊಡೆದಿದ್ರೆ ಓಕೆ ಫೈನ್. ಮೀಸಲಾತಿ ಆಕ್ರೋಶ ವ್ಯಕ್ತಪಡಿಸುವುದು ಸಹಜ, ಆದರೆ ಯಡಿಯೂರಪ್ಪ ಅವರ ಮನೆ ಯಾಕೆ ಹೊಡೆಯಬೇಕು. ಇದು ಬಿಜೆಪಿಯ ಆಂತರಿಕ ಸಮಸ್ಯೆ. ಬಿಜೆಪಿಯಲ್ಲಿ ಒಬ್ಬರಿಗೊಬ್ಬರಿಗೆ ಸಮಾಧಾನ ಇಲ್ಲ. ನ್ಯಾಷನಲ್ ಲೀಡರ್ಸ್ ಗಳುಬೆದರಿಸಿದ್ದಾರೆ. ಎಲ್ಲರಿಗೆ ಕಡಿವಾಣ ಹಾಕಿ ಹೆದರಿಸಿ ಬೆದರಿಸಿದ್ದಾರೆ. ರೈಟ್ ಲೆಫ್ಟ್ ಗೆ ಹೋಗ್ಬೇಡಿ ಅಂತ ಹೇಳುದ್ದಾರೆ. ಇನ್ನೂ ಕಲ್ಲು ತೂರಾಟದಲ್ಲಿ ವಿರೋಧ ಪಕ್ಷದವರ ಕೈವಾಡ ವಿಚಾರ ವಾಗಿ ಮಾತನಾಡಿ ಯಡಿಯೂರಪ್ಪ ಮಾತನಾಡೋದು ಅವರಿಗೆ ಬಿಟ್ಟ ವಿಚಾರ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ರಾಷ್ಟ್ರದಲ್ಲೇ ಒಂದು ಗೊಂದಲ ಸೃಷ್ಟಿ ಮಾಡಿದ್ದಾರೆ. ಸುಪ್ರೀಂವಿರುದ್ಧಇಬ್ಬರು ಮಂತ್ರಿಗಳು ಕೂತು ಮೀಸಲಾತಿ ಮಾಡಿದ್ದಾರೆ. ಯಾವುದೇ ವರದಿ ಇಲ್ಲ. ಹಿಂದುಳಿದ ವರ್ಗಗಳ ಆಯೋಗದ ವರದಿ ಇಲ್ಲ. ಮಧ್ಯಂತರ ವರದಿಯಲ್ಲಿ ತೀರ್ಮಾನ ಆಗಿಲ್ಲ. ಸರಿಯಾದ ಬದ್ಧತೆಯಿಂದ ಮೀಸಲಾತಿ ಮಾಡಿಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.