ಹುಬ್ಬಳ್ಳಿ: ಇದು ನನ್ನ ಹೊಸ ಅಧ್ಯಾಯ, ಎರಡನೆಯ ಇನ್ನಿಂಗ್ಸ್ ಎಂದು ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಬಹಳಷ್ಟು ಅಸಮಾಧಾನ ಇದೆ. ಬಿಜೆಪಿಯಲ್ಲಿನ ಅಸಮಾಧಾನ ಯಾವಾಗ ಸ್ಫೋಟ ಆಗುತ್ತೆ ಎಂದು ಗೊತ್ತಾಗಲ್ಲ. ನಾವು ಸೋತ ಬಿಜೆಪಿ ಅಭ್ಯರ್ಥಿಗಳನ್ನ ಸೆಳೆಯುತ್ತಿಲ್ಲ ಎಂದು ಹೇಳಿದರು.
ಇನ್ನು ವಿಧಾನ ಪರಿಷತ್ನಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ನನಗೊಂದ ಅವಕಾಶ ಮಾಡಿಕೊಟ್ಟಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರ, ರಾಜ್ಯದ ನಾಯಕರಿಗೆ ಧನ್ಯವಾದವನ್ನ ಸಲ್ಲಿಸುತ್ತೆನೆ. ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಷತ್ನಲ್ಲಿ ಚರ್ಚೆ ಮಾಡುತ್ತೇನೆ. ಈ ಭಾಗದ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ನೆನಗುದಿಗೆ ಬಿದ್ದಿವೆ, ಅವುಗಳನ್ನ ಆದಷ್ಟು ಬೇಗ ಪರಿಹಾರ ಮಾಡಲಿಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ. ರಾಜಕೀಯದಲ್ಲಿ ಬೇರೆ ಬೇರೆ ಅಧ್ಯಾಯಗಳಿರ್ತಾವೆ, ಇದು ನನ್ನ ಹೊಸ ಅಧ್ಯಾಯ, ಎರಡನೆಯ ಇನ್ನಿಂಗ್ಸ್ ಎಂದು ಹೇಳಿದರು.
ಅಲ್ಲದೆ ವಿಧಾನ ಪರಿಷತ್ ಸದಸ್ಯ ಮಾಡುವಾಗ ಕಾಂಗ್ರೆಸ್ ಜಗದೀಶ್ ಶೆಟ್ಟರ್ಗೆ ಇನ್ನೂ ಉನ್ನತ ಸ್ಥಾನಮಾನಗಳನ್ನ ನೀಡತ್ತೆ ಎಂದು ಹೇಳಿದೆ. ಸಭಾಪತಿ ಮಾಡುವುದು ಕಾಂಗ್ರೆಸ್ಗೆ ಬಿಟ್ಟ ವಿಚಾರ, ಸಭಾಪತಿ ನೀಡುವ ವಿಷಯವನ್ನು ನಮ್ಮ ಪಕ್ಷ ಪ್ರಸ್ತಾಪ ಮಾಡಿಲ್ಲ ಎಂದು ಶೆಟ್ಟರ್ ಹೇಳಿದರು.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಈಗಾಗಲೇ ನಮ್ಮ ಪಕ್ಷದ ವರಿಷ್ಠ ಜತೆಗೆ ಚರ್ಚೆ ಮಾಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಾನು ಸಿದ್ಧನಿದ್ದೇನೆ. ಎಲ್ಲಿಯೇ ಪ್ರವಾಸ ಮಾಡಿ ಅಂದ್ರು ನಾನು ನನ್ನ ಸಮಯವನ್ನ ಕೋಡ್ತೆನಿ.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಗೆಲ್ಲಲು ನಾನೂ ಪ್ರಯತ್ನ ಮಾಡ್ತೇನಿ. ಈ ಚುನಾವಣೆಯಲ್ಲಿ ನಿಮ್ಮ ಉಪಯೋಗ ತೆಗೆದುಕೊಳ್ಳುತ್ತೆವೆ ಎಂದು ನಮ್ಮ ಪಕ್ಷ ಹೇಳಿದೆ. ಉತ್ತರ ಕರ್ನಾಟಕದಲ್ಲಿ 11 ಲೋಕಸಭಾ ಕ್ಷೇತ್ರಗಳು ಬರ್ತಾವೆ. ಅದರಲ್ಲಿ 6-7 ಕ್ಷೇತ್ರದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ನಮಗೆ ಈಗಾಗಲೇ ಜನರಿಂದ ಬೆಂಬಲ ಸಿಗುತ್ತಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಚುನಾವಣೆಯಲ್ಲಿ ಬಿಜೆಪಿ ನಾಯಕರು, ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದ್ರು ಅನ್ನೋ ಸಂಸದ ಪ್ರತಾಪ್ ಸಿಂಹ ಹೇಳಿಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಒಳ ಒಪ್ಪಂದ ಮಾಡಿದವರು ಯಾರು, ಅವರ ಹೆಸರನ್ನ ಪ್ರತಾಪ್ ಸಿಂಹ ಬಹಿರಂಗ ಪಡಿಸಲಿ. ಪಕ್ಷದ ನಾಲ್ಕು ಗೋಡೆಗಳ ಮಧ್ಯ ಚರ್ಚೆ ಮಾಡುವ ವಿಚಾರವನ್ನ ಅವರು ಬಹಿರಂಗ ಮಾಡಿದ್ದಾರೆ. ಬಹಿರಂಗವಾಗಿ ಅವರ ಹೆಸರನ್ನ ಹೇಳಿಬಿಡಲಿ. ಅವರು ಯಾರು ಎಂಬುದು ಜನರಿಗೆ ಗೊತ್ತಾಗಲಿ ಎಂದರು.