ರಾಜ್ಯಪಾಲ (Rajya pal) ರಿಗೆ ಪತ್ರ ಬರೆದು ನ್ಯಾಯ ಕೇಳಿದಕ್ಕೆ ಬಿಎಂಟಿಸಿ ಡ್ರೈವರ್ (BMTC driver) ಸಸ್ಪೆಂಡ್ ಆಗಿದ್ದಾನೆ. ಭ್ರಷ್ಟಾಚಾರ ಪ್ರಶ್ನೆ ಮಾಡಿದ್ದಕ್ಕೆ ಡ್ರೈವರ್ ತ್ಯಾಗರಾಜ್ (Tyagraj) ಅವರನ್ನು ಬಿಎಂಟಿಸಿ ಎಂಡಿ ಟ್ರಾನ್ಫರ್ ಮಾಡಿದ್ದಾರೆ. ಇತ್ತೀಚೆಗೆ ಬಿಎಂಟಿಸಿಯಲ್ಲಿ ಸಾಲು ಸಾಲು ಅಕ್ರಮಗಳು ಬೆಳಕಿಗೆ ಬರ್ತಿದೆ.
ಈ ಬಗ್ಗೆ ದಾಖಲೆ ಸಮೇತ M.D. ಜಿ ಸತ್ಯವತಿ ಅವರಿಗೆ ಡ್ರೈವರ್ ತ್ಯಾಗರಾಜ್ ದೂರು ನೀಡಿದ್ದರು. ಆದರೆ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ದೂರು ನೀಡಿದ್ದ ತ್ಯಾಗರಾಜ್ ಗೆ ಬಿಎಂಟಿಸಿ ನಿಗಮ ನೋಟಿಸ್ ನೀಡಿದೆ. ಇದರಿಂದ ನೊಂದ ಚಾಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಾರಿಗೆ ಇಲಾಖೆಯ ಸೆಕ್ರೆಟರಿ ಡಾ. ಎನ್ ವಿ ಪ್ರಸಾದ್, ಹಾಗೂ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ ಅವರಿಗೆ ಪತ್ರ ಬರೆದು ನ್ಯಾಯ ಕೇಳಿದ್ದ. ಇದೀಗ ಬಿಎಂಟಿಸಿ ಎಂ ಡಿ ಸತ್ಯವತಿ ತ್ಯಾಗರಾಜ್ ನನ್ನ ಸಸ್ಪೆಂಡ್ ಮಾಡಿ ಆದೇಶ ಮಾಡಿದ್ದಾರೆ. ಇದನ್ನೂ ಓದಿ : – BJP ಜತೆ ಗುರುತಿಸಿಕೊಂಡಿದ್ದ ವಕೀಲೆಗೆ ಜಡ್ಜ್ ಆಗಿ ಬಡ್ತಿ- ವ್ಯಾಪಕ ವಿರೋಧ
ಬಿಎಂಟಿಸಿ ಎಂಡಿಯನ್ನು ಯಾರು ಪ್ರಶ್ನೆ ಮಾಡಬಾರದಾ ಅಥವಾ ಸತ್ಯವತಿ ಪ್ರಶ್ನಾತೀತರೆ. ನ್ಯಾಯ ಕೇಳುವುದೇ ತಪ್ಪಾ..? ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ : – ಚುನಾವಣೆಗೆ ಮೊದಲೇ ಪ್ರಹ್ಲಾದ್ ಜೋಶಿಯನ್ನು ಸಿಎಂ ಅಭ್ಯರ್ಥಿಯೆಂದು ಘೋಷಿಸಿ- ಬಿಜೆಪಿಗೆ ಕುಮಾರಸ್ವಾಮಿ ಸವಾಲು