ಬೆಂಗಳೂರು : ವರ್ತೂರ್ ಸಂತೋಷ್ ಬಂಧನದ ಬೆನ್ನಲ್ಲೇ ವನ್ಯಜೀವಿ ಅರಣ್ಯಾಧಿಕಾರಿ ರವೀಂದ್ರ ಕುಮಾರ್ (Wildlife Forest Officer Ravindra Kumar) ಪ್ರತಿಕ್ರಿಯಿಸಿದ್ದು, ಹುಲಿ ಉಗುರು ಹೊಂದಿದ್ರೆ ಅದು ಅಪರಾಧ. ಈ ಬಗ್ಗೆ ಶೀಘ್ರದಲ್ಲೇ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ .
ಮಾಧ್ಯಮದೊಂದಿಗೆ ಎಸ್ ಎಫ್ ಎಸ್ ರವೀಂದ್ರ ಮಾತನಾಡಿ, ಸದ್ಯಕ್ಕೆ ಹುಲಿ ಉಗುರು ಬಗ್ಗೆ ವರ್ತೂರು ಬಿಟ್ರೆ ಯಾವುದೇ ದೂರು ಸ್ವೀಕರಿಸಿಲ್ಲ. ಹುಲಿ ಉಗುರು ಹೊಂದಿದ್ರೆ ಅದು ಅಪರಾಧ ಎಂದಿದ್ದಾರೆ.
ಒಂದು ವೇಳೆ ದೂರು ಕೊಟ್ಟರೆ ವಲಯಾಧಿಕಾರಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿ ಅರಣ್ಯ ಅಧಿಕಾರಿಗಳಿಗೆ ವನ್ಯಜೀವಿ ಸಂರಕ್ಷಣೆ ಮಾಡಲು ಅಧಿಕಾರವಿದೆ. ಕೆಲವು ನಕಲಿ ಹುಲಿ ಉಗುರು ಹಾಕಿಕೊಂಡಿರುವ ಪ್ರಕರಣ ಕಂಡುಬಂದಿದೆ.
ತನಿಖೆ ಮಾಡಿ ನೈಜ ವಿಚಾರವನ್ನು ತಿಳಿದು ಕ್ರಮ ತೆಗೆದುಕೊಳ್ಳುವುದು ಖಚಿತವಾಗಲಿದೆ. ಪ್ರಾರಂಭಿಕ ಹಂತದಲ್ಲಿ ನೋಟೀಸ್ ನೀಡಿ ನಂತ್ರ ತಪಾಸಣೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅರಣ್ಯ ಇಲಾಖೆ 2 ಬಾರಿ ಪ್ರಕಟಣೆ ಮಾಡಿಕೊಳ್ಳಲು ಅವಕಾಶ ಕೊಡಲಾಗಿತ್ತು.ಇದನ್ನೆ ಮೀರಿ ಈಗ ಬಂದ್ರೆ ಏನು ಮಾಡುವುದಕ್ಕೆ ಆಗಲ್ಲ.. ಮುಂದೆ ತನಿಖೆ ಮಾಡಬೇಕು ಎಂದಿದ್ದಾರೆ.