ನವದೆಹಲಿ : ಕರ್ನಾಟಕದಲ್ಲಿ ರೆಡ್ ರೆಡ್ ಟೊಮೆಟೊ ಬ್ಯುಟಿಗೇ ಸಖತ್ ಡಿಮ್ಯಾಂಡ್ ಹೆಚ್ಚಾಗಿದ ಬೆನ್ನಲ್ಲೆ ಟೊಮೆಟೊವನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲು ಸರ್ಕಾರ ಹೊಸ ಪ್ಲಾನ್‌ಗೆ ಮುಂದಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಮುಂದಾಗಿದ್ದು, ಇಂದಿನಿಂದ ದೆಹಲಿ, ಗುರುಗ್ರಾಮ್ ಮತ್ತು ಫರಿದಾಬಾದ್‌ನ ವಿವಿಧ ಸ್ಥಳಗಳಲ್ಲಿ ಟೊಮೆಟೊಗಳನ್ನು ರಿಯಾಯಿತಿಯಲ್ಲಿ ಮಾರಾಟಕ್ಕೆ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಲಕ್ನೋ ಮತ್ತು ಕಾನ್ಪುರದಲ್ಲಿ ತಲಾ 15 ಮೊಬೈಲ್ ವ್ಯಾನ್‌ಗಳಲ್ಲಿ ಬೆಳಿಗ್ಗೆ 11 ರಿಂದ ಮಾರಾಟ ಪ್ರಾರಂಭವಾಗಲಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಸಂಸ್ಥೆಯಾದ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (ಎನ್‌ಸಿಸಿಎಫ್) ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಹೇಳಿರುವಂತೆ ಪ್ರತಿ ಕಿಲೋಗ್ರಾಂಗೆ ₹ 90 ದರದಲ್ಲಿ ಲಭ್ಯವಿರುತ್ತದೆ ಎಂದು ಸೂಚನೆ ನೀಡಲಾಗಿದೆ.